ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮೊದಲ ಭಾರತೀಯ ಐಫೋನ್ ತಯಾರಿಕ ಕಂಪನಿಯಾಗಲಿದೆ ಟಾಟಾ

ಬೆಂಗಳೂರು: ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾದ ಟಾಟಾ ಗ್ರೂಪ್, ಆಗಸ್ಟ್‌ನಲ್ಲಿ ಆಪಲ್ ಪೂರೈಕೆದಾರರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಹತ್ತಿರದಲ್ಲಿದೆ. ಇದೇ ಮೊದಲನೆ ಬಾರಿಗೆ ಸ್ಥಳೀಯ ಕಂಪನಿಯೊಂದು ಐಫೋನ್‌ಗಳ ಜೋಡಣೆಯನ್ನು ಕರ್ನಾಟಕದಲ್ಲಿ ಮಾಡಲಿದೆ ಎಂದು ವರದಿಯಾಗಿದೆ. 600 ಮಿಲಿಯನ್ ಡಾಲರ್ (ಸುಮಾರು ರೂ. 4,900 ಕೋಟಿ) ಗಿಂತ ಹೆಚ್ಚು ಮೌಲ್ಯದ ವಿಸ್ಟ್ರಾನ್ ಕಾರ್ಖಾನೆಯನ್ನು ಟಾಟಾ ಗ್ರೂಪ್ ಸುಮಾರು ಒಂದು ವರ್ಷದ ಮಾತುಕತೆಗಳ ಬಳಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಇತ್ತೀಚಿನ iPhone 14 ಮಾದರಿಯನ್ನು ಜೋಡಿಸುವ […]

ಭಾರತದಲ್ಲಿ ಆ್ಯಪಲ್‌ ಐಫೋನ್‌ 10ಆರ್‌ ಬೆಲೆ ಇಳಿಕೆ

ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್‌ ಕಂಪನಿಯು ಬಿಡುಗಡೆ ಮಾಡಿರುವ ಐಫೋನ್‌ 10ಆರ್‌ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಐಫೋನ್‌ 10ಆರ್‌ 64 ಜಿಬಿ ಬೆಲೆಯನ್ನು ₹ 17,900 ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಕ್ಯಾಷ್‌ಬ್ಯಾಕ್‌ ಸಹ ಸಿಗಲಿದೆ. ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ. ಆ್ಯಪಲ್‌ ಕಂಪನಿಯ ಭಾರತದ ಜಾಲತಾಣದಲ್ಲಿ ಯಾವುದೇ ಬೆಲೆಗಳು ಬದಲಾವಣೆಯಾಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು […]