ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: 8% ಡಿವಿಡೆಂಡ್ ಘೋಷಣೆ

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಇದರ 9ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನೈವೇದ್ಯ ಹೋಟೇಲಿನ ಅನುಗ್ರಹ ಸಭಾಂಗಣದಲ್ಲಿ ಜರುಗಿತು. ಸಂಘವು 9 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3408 ಸದಸ್ಯರನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.95.36 ಸಾಲ ವಸೂಲಾತಿ ನಡೆಸಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 36.8 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ನಾಲ್ಕು […]