ರಂಗಭೂಮಿಯ ಸಾಧಕ “ಅನೀಶ್ ಪ್ರಸಾದ್” ಎಂಬ ಬಾಲಕ : ಅಭಿನಯ ಸೊಗಸುಗಾರ, ಇವನೇ ಎಳೆಯ ಕನಸುಗಾರ

ಇದು”ಬಣ್ಣದ ಕನಸುಗಾರರು” ಸರಣಿಯ ನಾಲ್ಕನೆಯ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ರಂಗಭೂಮಿ ಎಂದಾಕ್ಷಣ ಹಲವು ವಿಷಯಗಳು ನೆನಪಾಗಬಹುದು. ಬಣ್ಣ, ಬೆಳಕು, ಮಾತು, ಧ್ವನಿ, ಸಂಗೀತ, ನಟನೆ, ನೃತ್ಯ..ರಂಗಭೂಮಿಯ ಪ್ರತಿಯೊಬ್ಬನಿಗೂ ಈ ಎಲ್ಲಾ ವಿಷಯಗಳ ಕನಿಷ್ಠ ಪ್ರಜ್ಞೆ […]