ಅಭಿಷೇಕ್ ಅಂಬರೀಷ್ ಜೊತೆ ಸಪ್ತಪದಿ ತುಳಿದ ಅವಿವಾ ಬಿದ್ದಪ್ಪ

ದಿವಂಗತ ರೆಬಲ್​ ಸ್ಟಾರ್​ ಅಂಬರೀಶ್​ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮಂಡ್ಯದ ಮರಿ ಗೌಡ ಅಭಿಷೇಕ್​ ಅಂಬರೀಶ್ ಪ್ರೀತಿಸಿದ ಹುಡುಗಿ, ಫ್ಯಾಷನ್ ಡಿಸೈನರ್​ ಅವಿವಾ ಬಿದ್ದಪ್ಪ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬ್ಯಾಚುರಲ್​ ಲೈಫ್​ಗೆ ಗುಡ್​ ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಶುಭ ಕರ್ಕಾಟಕ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರೀತಿಸಿದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಈ ಶುಭಕಾರ್ಯ ನಡೆಯುತ್ತಿದೆ. […]