ನಮ ಬಿರುವೆರ್ ಹಿರಿಯಡ್ಕದಿಂದ ಸಹಾಯಧನ ವಿತರಣೆ

ಉಡುಪಿ: ಕಳೆದ ಕೆಲವು ದಿನಗಳ ಹಿಂದೆ ಬಸ್ಸ್ ಅಪಘಾತದಲ್ಲಿ ತನ್ನ ಬಲ ಕೈ ಕಳೆದುಕೊಂಡ ಉಡುಪಿ ತಾಲೂಕಿನ ಹಿರಿಯಡಕ ಅಂಜಾರು ಗ್ರಾಮದ ಬಾಕ್ಯಾರ್ ಕಟ್ಟ ನಿವಾಸಿ ಭಾಸ್ಕರ ಶೆಟ್ಟಿ ಹಾಗೂ ಗುಲಾಬಿ ದಂಪತಿಯ ಪುತ್ರ ಅಜಿತ್ ಶೆಟ್ಟಿ ಅವರಿಗೆ ನಮ ಬಿರುವೆರ್ ಹಿರಿಯಡ್ಕ ಸಂಘಟನೆಯ ವತಿಯಿಂದ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರ. ಕಾರ್ಯದರ್ಶಿ ರವಿ ಎಸ್. ಪೂಜಾರಿ, ಕೋಶಾಧಿಕಾರಗಳಾದ ಪ್ರದೀಪ್ ಪೂಜಾರಿ, ವಿನುತ್ ಪೂಜಾರಿ, […]

ಖಾಸಗಿ ಬಸ್ ನ ಅವಾಂತರ: ಬಲಗೈ ಕಳೆದುಕೊಂಡ ಹುಡುಗನ ಚಿಕಿತ್ಸೆಗೆ ನೆರವಾಗುವಿರಾ?

ಉಡುಪಿ: ಬಸ್ ನ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅತೀ ಧಾವಂತದಲ್ಲಿ ನುಗ್ಗಿ ಬಂದ ಬಸ್ ವೊಂದು ಅಂತಿಮ ವರ್ಷದ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯೋರ್ವನ ಬಲಗೈಯನ್ನು ಬಲಿ ಪಡೆದುಕೊಂಡ ದಾರುಣ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದ್ದು, ಸದ್ಯ ಆತನ ಚಿಕಿತ್ಸೆ ಗೆ ನೆರವು‌ ನೀಡಬೇಕಾಗಿದೆ. ಅಜಿತ್ ಶೆಟ್ಟಿ ಮೂಲತ: ಹಿರಿಯಡಕದ ಅಂಜಾರಿನವರಾಗಿದ್ದು, ಎಂಜಿಎಂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅಜಿತ್ ಮಂಗಳವಾರದಂದು ತರಗತಿ ಮುಗಿಸಿಕೊಂಡು ಕಾಲೇಜಿನಿಂದ ಮನೆಯತ್ತಾ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ಕಳದ […]