ಬಸ್ಸಿನ ಮುಖ ಕಂಡಿಲ್ಲ ಎಳ್ಳಾರೆ-ಚೆನ್ನಿಬೆಟ್ಟು ಗ್ರಾಮ: ಬಸ್ಸು ಬಿಡ್ತೇವೆಂದು “ರೈಲು”ಬಿಡ್ತಾನೇ ಇದ್ದಾರೆ ಜನಪ್ರತಿನಿಧಿಗಳು

ವರದಿ : ದೀಪಕ್ ಕಾಮತ್ ಎಳ್ಳಾರೆ ಅಜೆಕಾರು : ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಲಕಟ್ಟೆ ಹಾಗೂ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಮತ್ತು ಚೆನ್ನಿಬೆಟ್ಟು ಗ್ರಾಮಗಳಿಗೆ ಇನ್ನೂ ಬಸ್ಸು ಸಂಚಾರದ ವ್ಯವಸ್ಥೆಯೇ ಆಗಿಲ್ಲ. ಇದರಿಂದಾಗಿ ಜನರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಎಳ್ಳಾರೆಯ ಸುತ್ತಮುತ್ತಲಿನ ಗ್ರಾಮಗಳಾದ ಕಡ್ತಲ ಕುಕ್ಕುಜೆ, ಮುನಿಯಾಲು, ಪಡುಕುಡೂರು, ಪೆರ್ಡೂರು ಗ್ರಾಮಗಳಿಗೆ ಬಸ್ಸು ವ್ಯವಸ್ಥೆ ಇದ್ದು, ಎಳ್ಳಾರೆ -ಚೆನ್ನಿಬೆಟ್ಟು ಭಾಗಕ್ಕೆ ಬಸ್ಸು ವ್ಯವಸ್ಥೆ ಇಲ್ಲದಿರುವುದು ನಿರಾಶಾದಾಯಕ ಸಂಗತಿಯಾಗಿದೆ. ಬಸ್ಸು ಬಿಡ್ತೇವೆಂದು “ರೈಲು”ಬಿಡ್ತಾನೇ ಇದ್ದಾರೆ […]