ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಉದ್ಘಾಟಿಸಿದರು. ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ 80 ನೇ ಜನ್ಮದಿನದಂದು ಅವರ ಚುನಾವಣಾ ಕ್ಷೇತ್ರದಲ್ಲಿ ವಿಶ್ವದರ್ಜೆಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವಿಮಾನ ನಿಲ್ದಾಣವು ಕಮಲದ ಆಕಾರದಲ್ಲಿದೆ. No. of airports built between Independence & 2014 in the country – 74. Shivamogga Airport, inaugurated by Sri @NarendraModi Ji today, […]

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಾಟ ಪತ್ತೆ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಜುಲೈ 24ರಂದು ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನ‌ಸಾಗಾಟ ಮಾಡಲಾಗಿದ್ದು, ಚಿನ್ನ ಮತ್ತು ಪ್ರಯಾಣಿಕನನ್ನು ಮಂಗಳೂರು ಕಸ್ಟಂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 34.18 ಲಕ್ಷ ರೂ. ಮೌಲ್ಯದ 963 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪೇಸ್ಟ್ ರೂಪದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಮಂಗಳೂರು: ವಿಮಾನ ರನ್ ವೇಯಿಂದ ಜಾರಿದ ಪ್ರಕರಣ; ಪೈಲೆಟ್ ಲೈಸೆನ್ಸ್ ರದ್ದು

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ‌ ನಡೆದಿದ್ದ ವಿಮಾನ ರನ್ ವೇಯಿಂದ ಜಾರಿದ ಪ್ರಕರಣ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನದ ಪೈಲಟ್‌ ಕ್ಯಾಪ್ಟನ್ ಪ್ರವೀಣ್ ಲೈಸೆನ್ಸ್ ರದ್ದುಗೊಂಡಿದೆ. ಕಳೆದ ಕೆಲ ದಿನಗಳ‌ ಹಿಂದೆ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ವಿಮಾನ ಜಾರಿತ್ತು. ಹೀಗಾಗಿ ಲೈಸನ್ಸ್ ರದ್ದು ಮಾಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶ ನೀಡಿದೆ. ನಿರ್ಲಕ್ಷ ಎಸಗಿದ ಹಿನ್ನೆಲೆಯಲ್ಲಿ ವಿಮಾನದ ಪೈಲೆಟ್ ಲೈಸೆನ್ಸ್ ರದ್ದಾಗಿದೆ. ಘಟನೆಯ ಹಿನ್ನೆಲೆ: ಜೂನ್‌ 30ರಂದು ಸಂಜೆ ದುಬೈಯಿಂದ […]

ಇಸ್ರೇಲ್ ನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವ್ಯಕ್ತಿ ಮುಂಬೈ ವಿಮಾನ‌ ನಿಲ್ದಾಣದಲ್ಲಿ‌ ಸಾವು

ಮಂಗಳೂರು: ಇಸ್ರೇಲ್‌ನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಆಗುತ್ತಿದ್ದ ವ್ಯಕ್ತಿ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾವನ್ನಪ್ಪಿರಿವ ಘಟನೆ ಗುರುವಾರ ಸಂಭವಿಸಿದೆ. ಮಂಗಳೂರಿನ ವಿಲಿಯಂ ಫೆರ್ನಾಂಡಿಸ್(49), ಮೃತ ಪಟ್ಟವರು. ಇವರು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಉದ್ಯೋಗದಲ್ಲಿದ್ದರು. ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಂಬೈನ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಬರುತ್ತಿದ್ದರು. ಮಿತಿಮೀರಿದ ಬುಕ್ಕಿಂಗ್ ನಿಂದ ಟಿಕೆಟ್ ನೀಡಲು ಏರ್ ಇಂಡಿಯಾ ನಿರಾಕರಿಸಿದ್ದು, ಹೀಗಾಗಿ ಏರ್ ಇಂಡಿಯಾ ಕಂಪನಿ ಅಧಿಕಾರಿಗಳ ವಿರುದ್ಧ ಸಂಬಂಧಿಕರ ಆರೋಪಿಸಿದ್ದಾರೆ.