ಆಗುಂಬೆ ಘಾಟಿಯಲ್ಲಿ ಒಂದು ತಿಂಗಳು ವಾಹನ ಸಂಚಾರ ಬಂದ್ !:ಮಾ.1 ರಿಂದ ತುರ್ತು ಕಾಮಗಾರಿ

ಉಡುಪಿ: ತುರ್ತು ಕಾಮಗಾರಿ ಪ್ರಯುಕ್ತ  ಆಗುಂಬೆ ಘಾಟಿ ವಾಹನ ಸಂಚಾರ ಮಾ.1 ರಿಂದ ಮಾ-31 ರವರೆಗೆ ಒಂದು ತಿಂಗಳ ಕಾಲ ಸ್ಥಗಿತಗೊಳ್ಳಲಿದ್ದು  ಆಗುಂಬೆ ಮೂಲಕ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮೊದಲಾದ ಕಡೆಗೆ ಸಾಗುವವರಿಗೆ  ರಸ್ತೆ ಬಂದ್ ಬಿಸಿ ತಟ್ಟಲಿದೆ.  ತುರ್ತು ಕಾಮಗಾರಿ:  ಆಗುಂಬೆ ಘಾಟಿಯಲ್ಲಿ  ಮಣ್ಣು ಕುಸಿತ, ಬಂಡೆಗಳ ಕುಸಿತ ಆಗಾಗ ನಡೆಯುತ್ತಲೇ ಇರುವ ಕಾರಣ ಆಗುಂಬೆಯ ಕೆಲವೊಂದು ತಿರುವುಗಳಲ್ಲಿ ವಾಹನ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ. ಆ ಸಲುವಾಗಿ 14ನೇ ತಿರುವಿನಿಂದ 7ನೇ ತಿರುವಿನವರೆಗೆ ಹಾಗೂ 7ನೇ […]