ಪುತ್ತೂರು: ಗದ್ದೆಗಿಳಿದು ಕೃಷಿ ಪಾಠ ಕಲಿತ ಚಿಣ್ಣರ ದಂಡು: ಇಲ್ಲಿದೆ ಶಾಲೆಯಲ್ಲೇ ಪ್ರಾಯೋಗಿಕ‌ ಪಾಠ

ಮಂಗಳೂರು: ಕರಾವಳಿ ಭಾಗದ ಬಹುತೇಕ ಶಾಲೆಗಳಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಕೃಷಿಕರ ಗದ್ದೆಗಳಲ್ಲಿ ಭತ್ತ ಬೇಸಾಯದ ಪ್ರಾಯೋಗಿಕ ಪಾಠ ನಡೆಯುತ್ತಿದೆ. ಆದರೆ ಇದಕ್ಕೆಲ್ಲ ಭಿನ್ನವಾಗಿ ಕಡಬ ತಾಲೂಕಿನ ಹಳೆನೇರಿಂಕಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಆಟದ ಮೈದಾನದ ಒಂದು ಭಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಕೃಷಿ ಪಾಠ ನಡೆಯುತ್ತಿದೆ. ಪಾಠಕ್ಕೂ ಸೈ:ಕೃಷಿ ಪಾಠಕ್ಕೂ ಸೈತುಳುನಾಡ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿಲ್ಲ ಎಂದು  ಆಚರಣೆಗಳನ್ನು ಅನುಕರಣೆ ಮಾಡದಿರುವ ಇಂದಿನ ದಿನಗಳಲ್ಲಿ ಗದ್ದೆ ಬೇಸಾಯ, ಕೊರಳ ಪರ್ಬ, ಹೊಸಕ್ಕಿ ಊಟ […]