ಹಣ್ಣು-ತರಕಾರಿ ಮತ್ತು ದಿನಸಿ ವರ್ತಕರ ಸಂಘ ಉದ್ಘಾಟನೆ

ಉಡುಪಿ: ಹಣ್ಣು, ತರಕಾರಿ ಮತ್ತು ದಿನಸಿ ವರ್ತಕರ ಸಂಘ ಆದಿ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಇದರ ಉದ್ಘಾಟನಾ ಸಮಾರಂಭ ಬುಧವಾರ ಆದಿ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಹಣ್ಣು, ತರಕಾರಿ ಮತ್ತು ದಿನಸಿ ವರ್ತಕರ ಸಂಘ ಸಂಘದ ಅಧ್ಯಕ್ಷ ಸತೀಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, […]
ಆದಿಉಡುಪಿಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ ಬೆಂಕಿಗಾಹುತಿ

ಆದಿಉಡುಪಿ: ಮೂಡುಬೆಟ್ಟುವಿನ ಗೋಪಾಲ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಕಿಟಕಿಯ ಗಾಜುಗಳು ಒಡೆದಿದ್ದು, ಅಡುಗೆ ಕೋಣೆಯ ಪಾತ್ರೆ, ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಕೋಣೆಗೆ ವ್ಯಾಪಿಸಿದೆ. ಅವಘಡ ಸಂಭವಿಸುತ್ತಿದ್ದಂತೆ ಮನೆಯೊಳಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಈ ಪೈಕಿ ಸಾವಿತ್ರಿ ಹಾಗೂ ಇನ್ನೊಬ್ಬರಿಗೆ ಗಾಯವಾಗಿದೆ ಎಂದು […]
ಆದಿ ಉಡುಪಿ ಪರಿಸರದಲ್ಲಿ ಹುಚ್ಚುನಾಯಿ ಕಡಿತ: ಸಾರ್ವಜನಿಕರಲ್ಲಿ ಆತಂಕದ ವಾತಾವರಣ

ಉಡುಪಿ: ಹುಚ್ಚು ನಾಯಿಯೊಂದು ಹಲವು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಆದಿಉಡುಪಿ ಪರಿಸರದಲ್ಲಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ತೀವ್ರ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದಿ ಉಡುಪಿ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಸಂದರ್ಭದ ಗಂಭೀರತೆಯನ್ನು ಅರಿತ ವಿಶು ಶೆಟ್ಟಿ ಅಂಬಲಪಾಡಿ, ಅಂಬಲಪಾಡಿ ಕೃಷ್ಣ ಹಾಗೂ ಸಂಗಡಿಗರು, ಹುಚ್ಚು ನಾಯಿಯಿಂದ ಬೇರೆ ಸಾರ್ವಜನಿಕರಿಗೆ ತೊಂದರೆ […]
ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಎಸಿಪಿ ಮತ್ತು ಪಿಎಸ್ ಐ ಕಾರಣ? ಡೆತ್ ನೋಟಿನಲ್ಲಿ ನಾಲ್ವರ ಹೆಸರು ಬಹಿರಂಗ!

ಉಡುಪಿ: ಆದಿ ಉಡುಪಿ ಶಾಲೆಯಲ್ಲಿ ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಗಳ ಕೊಠಡಿಯ ಕಾವಲು ಕಾಯುತ್ತಿದ್ದ ಮೀಸಲು ಪಡೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್, ಗುರುವಾರ ತಡರಾತ್ರಿಯಂದು ತನ್ನದೇ ಸರ್ವಿಸ್ ರೈಫಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಮೃತ ರಾಜೇಶ್ ಕುಂದರ್ ಬರೆದಿದ್ದಾರೆ ಎಂದೆನ್ನಲಾಗುವ ಡೆತ್ ನೋಟ್ ಒಂದು ಹೊರಬಂದಿದ್ದು, ಈತನ ಸಹೋದ್ಯೋಗಿ ಗಣೇಶ್ ಎಂಬುವವರಿಗೆ ಈ ಡೆತ್ ನೋಟ್ ಲಭ್ಯವಾಗಿದೆ. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಡಿಎಆರ್ ಎಸಿಪಿ ಉಮೇಶ್, ಅಶ್ಫಾಕ್ […]
ಉಡುಪಿ: ಕರ್ತವ್ಯಕ್ಕೆ ಮರಳಿದ ದಿನವೆ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್‌ಸ್ಟೆಬಲ್

ಉಡುಪಿ: ಕರ್ತವ್ಯದ ವೇಳೆ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಕುಂದರ್ ಅಮಾನತುಗೊಂಡ ಬಳಿಕ ಮತ್ತೆ ಕೆಲಸಕ್ಕೆ ಸೇರಿದ್ದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತ ರಾಜೇಶ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದರು. ಇವರು ಆದಿ ಉಡುಪಿಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ಟೋರ್ ರೂಮಿನ ಹೊರಗೆ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಇತರ ಸಿಬ್ಬಂದಿಗಳು […]