ಋಷಿಮುನಿಗಳು ವಿಜ್ಞಾನ-ವೇದಾಂತ ಬಲ್ಲ ಶ್ರೇಷ್ಠರು: ಅದಮಾರು ಶ್ರೀ

ಉಡುಪಿ: ಗ್ರಹಣವನ್ನು ಬರೀ ಕಣ್ಣಿನಲ್ಲಿ ನೋಡಬಾರದೆಂದು ಋಷಿಮುನಿಗಳು ಅಂದೇ ಹೇಳಿದ್ದರು. ಆದರೆ ವಿಜ್ಞಾನಿಗಳು ಗ್ರಹಣ ನೋಡಿ ಕಣ್ಣು ಹಾಳಾದ ನಂತರ ಬರೀ ಕಣ್ಣಲ್ಲಿ ಗ್ರಹಣ ನೋಡಬಾರದು ಎಂದು ತೀರ್ಮಾನಿಸುತ್ತಾರೆ. ಹಾಗಾಗಿ ನಮ್ಮ ವಿಜ್ಞಾನಿಗಳು ಅರ್ಧಂಬರ್ಧ ಜ್ಞಾನಿಗಳಾಗಿದ್ದು, ಅವರಲ್ಲಿ ಪರಿಪೂರ್ಣತೆ ಇಲ್ಲ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರವಿಭಾಗ, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ […]