ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ

ಉಡುಪಿ: ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹಾಗೂ ಅವರ ಶಿಷ್ಯ, ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಅವರು ಶುಕ್ರವಾರ ಬಾಳೆ ಮುಹೂರ್ತ ನೆರವೇರಿಸುವ ಮೂಲಕ 2020, ಜನವರಿ 18ರಿಂದ ಆರಂಭವಾಗಲಿರುವ ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಿದರು. ಮಠದ ಪುರೋಹಿತರಾದ ಶಿಬರೂರು ವಾಸುದೇವ ತಂತ್ರಿ ನೇತೃತ್ವದಲ್ಲಿ ಬಾಳೆ ಮುಹೂರ್ತದ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೊದಲಿಗೆ ಚಂದ್ರಮೌಳೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಅದಮಾರು ಮಠದಿಂದ ಬಾಳೆ ಗಿಡ, ತುಳಸಿ ಗಿಡ ಮತ್ತು ಕಬ್ಬಿನ ಜಲ್ಲೆಯನ್ನು […]