ಮಂದಾರ್ತಿ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಕಾರು, ಇಬ್ಬರು ಪ್ರಯಾಣಿಕರು ಮೃತ್ಯು ವಶ

ಮಂದಾರ್ತಿ: ಮಂದಾರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋದ ಕಾರು ಹಾಗೂ ಎರಡು ಮೃತದೇಹ ಪತ್ತೆಯಾಗಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಸ್ಥಳೀಯರು ವಿದ್ಯುತ್ ಅವಘಡ ಆಗಿರಬಹುದೆಂಬ ಶಂಕೆಯಿಂದ ಘಟನಾ ಸ್ಥಳಕ್ಕೆ ಬಂದಾಗ, ಹೊತ್ತಿ ಉರಿಯುತ್ತಿರುವ ಕಾರು ಪತ್ತೆಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಬೆಂಕಿ ಆಕಸ್ಮಿಕಕ್ಕೆ ಬಲಿಯಾದರೆ ಅಥವಾ ಇದೊಂದು ಉದ್ದೇಶಪೂರ್ವಕ ಕೃತ್ಯವೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.
ಆಸ್ಟ್ರೇಲಿಯಾದ ಪ್ರಖ್ಯಾತ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು

ದೆಹಲಿ: ಕ್ರಿಕೆಟ್ ಪ್ರೇಮಿಗಳಿಗೊಂದು ಆಘಾತ ಕಾದಿದೆ. ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾದ ಆಸ್ಟ್ರೇಲಿಯಾ ಆಟಗಾರ ಶೇನ್ ವಾರ್ನ್ ನಿಧನರಾದ ಸುಮಾರು ಎರಡು ತಿಂಗಳ ನಂತರ ಅವರ ಸಹ ಆಟಗಾರನಾಗಿದ್ದ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತವೊಂದರಲ್ಲಿ ಮೃತ ಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. 46 ವರ್ಷ ವಯಸ್ಸಿನ ಮತ್ತು ಆಸ್ಟ್ರೇಲಿಯಾ ಪರ 26 ಬಾರಿ ಆಡಿರುವ ಸೈಮಂಡ್ಸ್ ಶನಿವಾರ ರಾತ್ರಿ ಟೌನ್ಸ್‌ವಿಲ್ಲೆಯಿಂದ […]
ಟೆಂಪೋ ಟ್ರಾವೆಲರ್ ಪಲ್ಟಿ; ಶಾಲಾ ಬಾಲಕ ಮೃತ್ಯು

ಕಾರ್ಕಳ: ಶಾಲಾ ಪ್ರವಾಸಕ್ಕಾಗಿ ಉಡುಪಿಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಒಂದು ಉರುಳಿ ಬಿದ್ದು ಶಾಲಾ ಬಾಲಕನೋರ್ವ ಸ್ಥಳದಲ್ಲೇ ಅಸುನೀಗಿದ ಘಟನೆ ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿ ಎಸ್ ಕೆ ಬಾರ್ಡರ್ ಬಳಿ ಮೇ.8 ರಂದು ಸಂಜೆ ನಡೆದಿದೆ. ಮೃತ ಬಾಲಕನನ್ನು ಧಾರವಾಡ ಮೂಲದ ಹೇಮಂತ್ ಎಂದು ಗುರುತಿಸಲಾಗಿದೆ. ಶಾಲಾ ಪ್ರವಾಸದ ಟೆಂಪೋ ಟ್ರಾವೆಲರ್ ಉಡುಪಿ ಕಡೆ ಬರುತ್ತಿದ್ದು, ಕುದುರೆಮುಖ ಘಾಟಿ ತಲುಪುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಇದರ ಪರಿಣಾಮ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕಾರ್ಕಳದ ಸರಕಾರಿ […]
ಬೆಂಗಳೂರಿನ ಕೆಂಗೇರಿಯಲ್ಲಿ ಬಸ್ ಅಫಘಾತ: 29 ಪ್ರಯಾಣಿಕರು ಗಾಯಾಳು

ಬೆಂಗಳೂರು: ಕೆಂಗೇರಿಯ ಮೈಸೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ 29 ಜನರು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ಬೆಂಗಳೂರಿನ ಡಿಸಿಪಿ ಡಾ ಸಂಜೀವ್ ಪಾಟೀಲ್ ಸುದ್ದಿ ಸಂಸ್ಥೆ ಎ ಎನ್ ಐ ಗೆ ತಿಳಿಸಿದ್ದಾರೆ. ಪ್ರಯಾಣಿಕರಲ್ಲಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ 45 ಮಂದಿ ಪ್ರಯಾಣಿಕರಿದ್ದು ಮಡಿಕೇರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. Karnataka | 25 people received minor injuries and 4 were […]
ಸಾಲಿಗ್ರಾಮದಲ್ಲಿ ಸ್ಕೂಟರ್ ಗೆ ಬಸ್ ಢಿಕ್ಕಿ; ಸವಾರ ಸಾವು

ಕುಂದಾಪುರ: ಬಸ್ಸೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಡೆದಿದೆ. ಮೃತರನ್ನು ಬನ್ನಾಡಿ ಗ್ರಾಮದ ಬಡಾಬೆಟ್ಟು ಉಪ್ಲಾಡಿ ನಿವಾಸಿ 56 ವರ್ಷದ ಶೀನ ಪೂಜಾರಿ ಎಂದು ಗುರುತಿಸಲಾಗಿದೆ. ಮೇ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇವರ ಸ್ಕೂಟರ್‌ಗೆ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶೀನ ಪೂಜಾರಿ, […]