ಪಾದಚಾರಿಗಳಿಗೆ ಕಾರು ಡಿಕ್ಕಿ: ಹಲವರಿಗೆ ಗಾಯ; ಓರ್ವ ಮೃತ್ಯುವಶ

ಮಣಿಪಾಲ: ಇಲ್ಲಿನ ಸೆಂಟ್ರಲ್ ಪಾರ್ಕ್ ಹೋಟೇಲ್ ಇಳಿಜಾರು ರಸ್ತೆಯಲ್ಲಿ ತಡರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು, ಓರ್ವ ಯುವಕ ಮೃತನಾಗಿದ್ದಾನೆ. ಇಲ್ಲಿನ ಐನಾಕ್ಸ್ ಚಿತ್ರಮಂದಿರದ ಹತ್ತಿರ ಹೋಟೇಲ್ ಒಂದರಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ(18) ಮೃತಪಟ್ಟ ಯುವಕ. ಇನ್ನುಳಿದ ಇತರ ಪಾದಾಚಾರಿಗಳಾದ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಫುಲ್ ಚೌಧರಿ, ಸುಕ್ದೇಬ್ ಕರ್ಮರ್ಕರ್ ಇವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಎಲ್ಲರಿಗೂ […]
ಸುಳ್ಯ: ಸ್ಕೂಟರ್-ಕಾರ್ ಡಿಕ್ಕಿ; ಅಣ್ಣ- ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆದ್ದಾರಿಯಲ್ಲಿ ಕಾರೊಂದಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಯುವಕ ಮತ್ತು ಆತನ ಸಹೋದರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸುಬ್ರಹ್ಮಣ್ಯ-ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಡಪಳ ಬಾಜಿನಡ್ಕದ ನಿಶಾಂತ್ ಹಾಗೂ ಅವರ ತಂಗಿ ಮೋಕ್ಷ ಎಂದು ಗುರುತಿಸಲಾಗಿದೆ. ನಿಶಾಂತ್ ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಹೋದರಿ 5 ನೇ ತರಗತಿಯಲ್ಲಿ ಓದುತ್ತಿದ್ದಳು […]
ಸ್ಕೂಟರ್ ಅಪಘಾತ: ಹಿರಿಯ ನಾಗರಿಕರಿಗೆ ಮೂಳೆ ಮುರಿತ

ಉಡುಪಿ: ತೆಂಕಪೇಟೆ ನಿವಾಸಿ ರವೀಂದ್ರ ಭಟ್ (63) ಎನ್ನುವವರು ಸೆಪ್ಟೆಂಬರ್ 08 ರಂದು ತನ್ನ ಸ್ಕೂಟರ್ ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ತೆರಳಿದ್ದು, ಮರಳಿ ತನ್ನ ಮನೆಗೆ ಹೋಗುವಾಗ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಅಜ್ಜರಕಾಡು ಆಸ್ಪತ್ರೆಯ ಮುಂಭಾಗದ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಜೋಡುಕಟ್ಟೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಸವಾರರೊಬ್ಬರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿ ರವೀಂದ್ರ ಭಟ್ ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ, ರವೀಂದ್ರ ಭಟ್ […]
ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿ ದ್ವಿಚಕ್ರ ವಾಹನ ಸವಾರನ ಮೃತ್ಯು ಪ್ರಕರಣ: ಆರೋಪಿಗೆ ಕಾರಾಗೃಹ ವಾಸ ಶಿಕ್ಷೆ

ಉಡುಪಿ: ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿ, ದ್ವಿಚಕ್ರ ವಾಹನ ಸವಾರನ ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2018 ನವೆಂಬರ್ 12 ರಂದು ಸಂಜೆ 4.15 ರ ಸುಮಾರಿಗೆ ಉದ್ಯಾವರದ ಸಂಪತ್ ಕುಮಾರ್ ಎಂಬಾತನು ಡಯಾನ ಜಂಕ್ಷನ್‌ನಿಂದ ಹಳೇ ತಾಲೂಕು ಆಫೀಸ್ ಕಡೆಗೆ ಏಕಮುಖ ಸಂಚಾರ ರಸ್ತೆಯಲ್ಲಿ ತನ್ನ ಆಟೋರಿಕ್ಷಾವನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ, ದ್ವಿಚಕ್ರ ವಾಹನ ಸವಾರ ಗಣೇಶ್ ಎಂಬಾತನಿಗೆ […]
ಗೃಹ ಸಚಿವ ಅರಗ ಜ್ಞಾನೇಂದ್ರ ಬೆಂಗಾವಲು ವಾಹನಕ್ಕೆ ಕಾರು ಢಿಕ್ಕಿ; ಭದ್ರಾವತಿ ಬಳಿ ಅಪಘಾತ

ಭದ್ರಾವತಿ: ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನಕ್ಕೆ ಎದುರುಗಡೆಯಿಂದ ಬರುತ್ತಿದ್ದಂತ ಮತ್ತೊಂದು ಕಾರು ಢಿಕ್ಕಿ ಹೊಡೆದಿರುವ ಘಟನೆ ಭದ್ರಾವತಿಯ ಜಂಕ್ಷನ್ ಬಳಿ ನಡೆದಿದೆ. ಸಚಿವ ಅರಗ ಜ್ಞಾನೇಂದ್ರ ತುಮಕೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದು ಈ ವೇಳೆ ಎದುರುಗಡೆ ಬರುತ್ತಿದ್ದ ಕಾರೊಂದು ಬೆಂಗಾವಲು ವಾಹನಕ್ಕೆ ಢಿಕ್ಕಿಯಾಗಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.