ಕುಸಿದ ಕಾಂಕ್ರೀಟ್ ರಸ್ತೆ; ಪಲ್ಟಿಯಾಗಿ ಹೊಳೆಗೆ ಬಿದ್ದ ಟಿಪ್ಪರ್

ಉಡುಪಿ: ಕಾಂಕ್ರೀಟ್ ರಸ್ತೆ ಕುಸಿದ ಪರಿಣಾಮ ಚಲಿಸುತ್ತಿದ್ದ ಟಿಪ್ಪರೊಂದು ಪಲ್ಟಿಯಾಗಿ ಸಮೀಪದ ಹೊಳೆಗೆ ಬಿದ್ದ ಘಟನೆ ಉಡುಪಿ ಸಮೀಪದ ಕಿದಿಯೂರು ಸಂಕೇಶ್ವರ ರಸ್ತೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಣ್ಣು ತುಂಬಿದ ಟಿಪ್ಪರೊಂದು ಸಂಚರಿಸುತ್ತಿದ್ದಾಗ ಕಾಂಕ್ರೀಟ್ ರಸ್ತೆ ಕುಸಿದು ಪಲ್ಟಿಯಾಯಿತು ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಸಂಪೂರ್ಣವಾಗಿ ಕುಸಿದ ಪರಿಣಾಮ ಟಿಪ್ಪರ್ ಸಮೀಪದ ಕಲ್ಮಾಡಿ ಹೊಳೆಗೆ ಉರುಳಿ ಬಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.  

ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿ ಸಾವು : ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಅತೀ ವೇಗ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ, ಅಪಘಾತಪಡಿಸಿ, ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಜನವರಿ 09 ರಂದು ಬೆಳಗ್ಗೆ 5.20 ಸುಮಾರಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಹೈವೆ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಭಾಕರ ಎಂಬಾತನು ಕೆನರಾ ಟೂರಿಸ್ಟ್ ಬಸ್ಸನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ, ರಸ್ತೆ ಬದಿ ನಿಂತಿದ್ದ ನಾಗರಾಜ ಎಂಬಾತನಿಗೆ ಢಿಕ್ಕಿ ಹೊಡೆದ […]

ಪಡುಬಿದ್ರಿ ಬಳಿ ಬೈಕ್‌ಗೆ‌ ಟೆಂಪೋ ಢಿಕ್ಕಿ; ಗಾಯಾಳು ಯುವಕ ಆಸ್ಪತ್ರೆಯಲ್ಲಿ ಸಾವು

ಉಡುಪಿ: ಪಡುಬಿದ್ರಿ ಬಳಿ ಬೈಕ್‌ಗೆ‌ ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಲಿಮಾರು‌‌ ನಿವಾಸಿ ಖಲಂದರ್ ರಫೀಕ್ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಎರ್ಮಾಳು ಮಸೀದಿಯಿಂದ ಪಡುಬಿದ್ರಿ ಕಡೆಗೆ ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಟೆಂಪೋ ಒಂದು ಬಂದು‌‌ ಢಿಕ್ಕಿ ಹೊಡೆದಿತ್ತು. ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಖಲಂದರ್‌ ರಫೀಕ್‌ ಅನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮುಂಜಾನೆ ಆತ ಅಸುನೀಗಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್- ಲಾರಿ ಮುಖಾಮುಖಿ ಢಿಕ್ಕಿ ಹಲವರಿಗೆ ಗಾಯ, ಚಾಲಕರು ಗಂಭೀರ 

ಮಂಗಳೂರು: ಬಸ್-ಲಾರಿ‌ ಮುಖಾಮುಖಿ ಢಿಕ್ಕಿಯಾಗಿ‌ ಹಲವರು ಗಾಯಗೊಂಡಿರುವ ಘಟನೆ ಮೂಡಬಿದ್ರೆಯ ತೋಡಾರು ಮಸೀದಿ ಬಳಿ ಮಂಗಳವಾರ ಸಂಭವಿಸಿದೆ. ಬಸ್ ಮೂಡಬಿದಿರೆಯಿಂದ ಮಂಗಳೂರು ಕಡೆಗೆ ಹಾಗೂ ಲಾರಿ ಮಂಗಳೂರಿಂದ ಮೂಡಬಿದಿರೆ ಕಡೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಬಸ್ ಹಾಗೂ ಲಾರಿ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೊರತೆಗೆಯಲು ಹರಸಹಾಸ‌ ಪಡಬೇಕಾಯಿತು. ಅಲ್ಲದೇ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಹಿತ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ ಹಾಗೂ‌ ಲಾರಿಯ‌ ಮುಂಭಾಗ ಪೂರ್ಣ ಜಖಾಂ ಆಗಿವೆ. ಘಟನೆಯಿಂದ ಕೆಲ […]

ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಬೈಕ್ ಸವಾರ ಸಾವು

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಲ್ಲಿ ಶುಕ್ರವಾರ ಸಂಭವಿಸಿದೆ. ಸುಳ್ಯ ನಿವಾಸಿ ಶೀನಪ್ಪ ರೈ(53)  ಮೃತ ದುರ್ದೈವಿ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಶೀನಪ್ಪ ರೈ ಸುಬ್ರಹ್ಮಣ್ಯದ ಕೆ.ಎಸ್. ಎಸ್.ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.