ಪಡುಬಿದ್ರಿ ಬಳಿ ಬೈಕ್‌ಗೆ‌ ಟೆಂಪೋ ಢಿಕ್ಕಿ; ಗಾಯಾಳು ಯುವಕ ಆಸ್ಪತ್ರೆಯಲ್ಲಿ ಸಾವು

ಉಡುಪಿ: ಪಡುಬಿದ್ರಿ ಬಳಿ ಬೈಕ್‌ಗೆ‌ ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಲಿಮಾರು‌‌ ನಿವಾಸಿ ಖಲಂದರ್ ರಫೀಕ್ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ.

ಶುಕ್ರವಾರ ಮಧ್ಯಾಹ್ನ ಎರ್ಮಾಳು ಮಸೀದಿಯಿಂದ ಪಡುಬಿದ್ರಿ ಕಡೆಗೆ ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಟೆಂಪೋ ಒಂದು ಬಂದು‌‌ ಢಿಕ್ಕಿ ಹೊಡೆದಿತ್ತು. ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಖಲಂದರ್‌ ರಫೀಕ್‌ ಅನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮುಂಜಾನೆ ಆತ ಅಸುನೀಗಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.