ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸಿದ ಶಾರ್ವರಿಗೆ ಆಚಾರ್ಯಾಸ್ ಏಸಿನಲ್ಲಿ ಸನ್ಮಾನ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಾರ್ಷಿಕ ಪರೀಕ್ಷೆಯಲ್ಲಿ 623 ಅಂಕ ಗಳಿಸಿದ ಉಡುಪಿ ಮೂಲದ ಬೆಂಗಳೂರಿನ ಶಾರ್ವರಿ ಪೆಜತ್ತಾಯ ಅವರನ್ನು ಉಡುಪಿಯ ಆಚಾರ್ಯಾಸ್ ಏಸಿನಲ್ಲಿ ಅಭಿನಂದಿಸಲಾಯಿತು. ಉಡುಪಿ ತೆಂಕಪೇಟೆಯ ಆಚಾರ್ಯಾಸ್ ಏಸಿನಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ವಾದಿರಾಜ ಆಚಾರ್ಯ ಅವರು ಶಾರ್ವರಿ ಪೆಜತ್ತಾಯ ಅವರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಪ್ರಸ್ತುತ ಏಸ್ ಸಂಸ್ಥೆಯಲ್ಲಿ ಆನಲೈನ್ ಮುಖಾಂತರ ಎಸ್ಸೆಸ್ಸೆಲ್ಸಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾರ್ವರಿ ಪೆಜತ್ತಾಯ, ಗರಿಷ್ಟ ಅಂಕಗಳಿಸಲು ತಾನು […]