ಬೆಳಗಾವಿಯಲ್ಲಿ ಮಿಂಚಿದ ಅಕ್ಕ ಪಡೆ: ಕುತೂಹಲದಿಂದ ಕಾರ್ಯಕ್ರಮಕ್ಕೆ ಹೋದ್ರೆ ಶಾಕ್

ಬೆಳಗಾವಿ: ನಗರದಲ್ಲಿ ಅಕ್ಕ ಪಡೆ ನಡೆಸಿದ ತ್ವರಿತ ಕಾರ್ಯಾಚರಣೆಯಿಂದ ಕೇವಲ ಎರಡು ದಿನಗಳಲ್ಲಿ ಎರಡು ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆದು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯ ವಿವಾಹ ಕಾನೂನುಬಾಹಿರವೆಂದು ತಿಳಿದಿದ್ದರೂ ಪೋಷಕರು ಮುಂದುವರಿದಿದ್ದ ಎರಡು ವಿಭಿನ್ನ ಘಟನೆಗಳಲ್ಲಿ ಅಕ್ಕ ಪಡೆ ತಕ್ಷಣ ಮಧ್ಯಪ್ರವೇಶ ಮಾಡಿ ವಿವಾಹಗಳನ್ನು ನಿಲ್ಲಿಸಿದೆ. ರಕ್ಷಿಸಲಾದ ಬಾಲಕಿಯರು 13 ಮತ್ತು 17 ವರ್ಷದವರು ಎಂದು ತಿಳಿದುಬಂದಿದೆ. ಬೆಳಗಾವಿಯ ವಂಟಮೂರಿ ಕಾಲೋನಿಯಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿರುವುದು […]