ನವದೆಹಲಿ: ಟಿವಿಎಸ್ ಮೋಟಾರ್ ದೇಶದ ಮೊದಲ ಎಥನಾಲ್ ಆಧಾರಿತ ‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದ್ದು ಇದು ಗ್ರಾಹಕರನ್ನು ಸೆಳೆಯುವಂತಿದೆ.
ಟಿವಿಎಸ್ ಮೋಟಾರ್ ಕಂಪನಿ 2018ರಲ್ಲಿ ದೆಹಲಿಯಲ್ಲಿ ನಡೆದ ಆಟೋಮೊಬೈಲ್ ಎಕ್ಸ್ಪೋದಲ್ಲಿ ಮೊದಲ ಟಿವಿಎಸ್ ಅಪಾಚಿ 200 4ವಿ ಎಥನಾಲ್ ವಾಹನವನ್ನು ಪ್ರದರ್ಶಿಸಿತ್ತು. ಟಿವಿಎಸ್ ಅಪಾಚಿ, ಟಿವಿಎಸ್; ಮೋಟಾರ್ ಕಂಪನಿಯ ಭಾಗವಾಗಿದ್ದು, ದೇಶಾದ್ಯಂತ 3.5 ದಶಲಕ್ಷ ಗ್ರಾಹಕರನ್ನು ಒಳಗೊಂಡಿದೆ.
ಟಿವಿಎಸ್ ಮೋಟಾರ್ ಕಂಪನಿ, ಗ್ರಾಹಕರಿಗೆ ಎಥನಾಲ್ ಆಧಾರಿತ ವಾಹನಗಳು ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶ ಹೊಂದಿದ್ದು ಎಥನಾಲ್ ಇಂಧನದ ವಾಹನಗಳು ಚಾಲನೆಯ ಅನುಭವ, ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪರಿಸರದ ಮೇಲೆ ಸಕಾರಾತ್ಮಕ ಸುಸ್ಥಿರ ಪರಿಣಾಮ ಬೀರುತ್ತದೆ. ಭಾರತದ ಹಸಿರು ಭವಿಷ್ಯಕ್ಕೆ ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ 100 ಒಂದು ಮಹತ್ವದ ಕೊಡುಗೆಯಾಗಿದೆ.
ಹೇಗೆ ತಯಾರಿಕೆ?
ಎಥನಾಲ್ ಅನ್ನು ನವೀಕರಿಸಬಹುದಾದ ಸಸ್ಯ ಮೂಲಗಳಿಂದ ದೇಶೀಯವಾಗಿ ತಯಾರಿಸಲಾಗುತ್ತದೆ. ಇದು ವಿಷಕಾರಿಯಲ್ಲದ, ಜೈವಿಕವಾಗಿ ಸಂಸ್ಕರಿಸಬಹುದಾದಂಥ ಸುರಕ್ಷಿತ ನಿರ್ವಹಣೆ, ಸಂಗ್ರಹ ಹಾಗೂ ಸಾರಿಗೆ ಒದಗಿಸುವ ಇಂಧನವಾಗಿದೆ. ಇದರಲ್ಲಿ ಶೇ. 35ರಷ್ಟು ಆಮ್ಲಜನಕವಿದ್ದು, ನೈಟ್ರೋಜನ್ ಆಕ್ಸೈಡ್ ಹೊರಸೂಸುವುದನ್ನು ಕಡಿತಗೊಳಿಸುತ್ತದೆ.
ಎಥನಾಲ್ ಬಳಕೆಯಿಂದ ಪೆಟ್ರೋಲಿಯಂ ಆಮದಿನ ಮೇಲೆ ಅವಲಂಬನೆಯನ್ನು ತಪ್ಪಿಸಬಹುದು ಹಾಗೂ ಇಂಧನದ ಭದ್ರತೆಯನ್ನು ಹೆಚ್ಚಿಸಬಹುದು.
ಏನ್ ಸ್ಪೆಷಲ್?
ಈ ವಾಹನದ ದರ 1.20 ಲಕ್ಷ ರೂ. ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100 ಹಸಿರು ಬಣ್ಣದ್ದಾಗಿದ್ದು, ಎಥನಾಲ್ ಲೋಗೋವನ್ನು ಒಳಗೊಂಡಿದೆ. ಇದರಲ್ಲಿ ಟ್ವಿನ್ ಸ್ಪ್ರೇ ಟ್ವಿನ್ ಪೋರ್ಟ್ ಇಎಫ್ ಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು 21 ಸೆಕೆಂಡುಗಳನ್ನು 8500 ಆರ್ ಪಿಎಂ (ಪ್ರತಿ ನಿಮಿಷದ ವೇಗ ) ವೇಗ ಹೊಂದಿದ್ದು, 18.1 ನ್ಯೂಟನ್ ಮೀಟರ್ ಗೆ 7000 ಆರ್ ಪಿಎಂ ಹೊಂದಿದ್ದು, ಗಂಟೆಗೆ 129 ಕಿ.ಮೀ ಕನಿಷ್ಠ ವೇಗ ಹೊಂದಿದೆ. ಇದರ ವಿಶೇಷ ಆವೃತ್ತಿ ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕದಲ್ಲಿ ಲಭ್ಯವಿವೆ. ಬೈಕ್ ಕ್ರೇಜ್ ಇರುವವರಿಗೆ ಈಟಿವಿಎಸ್ ಬೈಕ್ ನಲ್ಲಿ ಸವಾರಿ ಮಾಡಿ ಸ್ವತಃ ಅನುಭವ ಪಡೆದುಕೊಳ್ಳಬಹುದು.