ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಮತ್ತೊಂದು ಬಲಿಯಾಗಿದ್ದು, ಪೊಲೀಸ್ ಫೈರಿಂಗ್ ನಲ್ಲಿ ಗುಂಡೇಟು ತಿಂದಿದ್ದ ಸೈಯದ್ ನದೀಮ್ ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಇದರೊಂದಿಗೆ ಗಲಭೆಯಲ್ಲಿ ಈವರೆಗೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಆಗಸ್ಟ್ 11ರಂದು ರಾತ್ರಿ ಡಿಜೆ ಹಳ್ಳಿ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಈತನ ಭುಜಕ್ಕೆ ಗುಂಡೇಟು ಬಿದ್ದಿತ್ತು. ಇದೀಗ ಚಿಕಿತ್ಸೆ ಫಲಿಸದೆ ಈತ ಮೃತಪಟ್ಟಿದ್ದಾನೆ. ಗಲಭೆ ವೇಳೆ ಪೊಲೀಸರ ಫೈರಿಂಗ್ ಗೆ ಮೂವರು ಬಲಿಯಾಗಿದ್ದರು.