ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕಾದ ಐಸಿಎಸ್‌ನಿಂದ ಸ್ವಾನ್ ಗೌರವ

ಉಡುಪಿ: ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿಯು ವಿಶ್ವ ಛಾಯಾಗ್ರಹಣದ ಅಂಗವಾಗಿ ಕೊಡಮಾಡುವ ಬಹು ಪ್ರತಿಷ್ಠಿತ ಪ್ರಶಸ್ತಿ ಗೌರವ ‘ಸ್ವಾನ್’ ಅನ್ನು ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ಪುರಸ್ಕಾರ ಮಾಡಿದೆ.

ಪತ್ರಿಕಾ ಛಾಯಾಗ್ರಹಣದಲ್ಲಿ ಅವರ ಅನನ್ಯ ಅನುಭವ ಮತ್ತು ಕೊಡುಗೆಯನ್ನು ನೋಡಿ ಅವರು ಕಳುಹಿಸಿದ ಪತ್ರಿಕಾ ಛಾಯಾಗ್ರಹಣ ಚಿತ್ರಗಳನ್ನು ಅವಲೋಕಿಸಿ ಈ ಗೌರವವನ್ನು ನೀಡಲಾಗಿದೆ.

ಈ ಬಾರಿ ವಿಶ್ವದ ಮೂವತ್ತು ಛಾಯಾಚಿತ್ರ ಕಲಾವಿದರಿಗೆ ಮಾತ್ರ ಈ ಗೌರವಪಾತ್ರವಾಗಿದೆ. ಅವರದಲ್ಲಿ ಆಸ್ಟ್ರೋ ಮೋಹನ್ ಓರ್ವರು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದು ಆಂಧ್ರ ಪ್ರದೇಶ ಫೊಟೋಗ್ರಾಫಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಟಿ. ಎಸ್. ರೆಡ್ಡಿ ತಿಳಿಸಿದ್ದಾರೆ.