ಉಡುಪಿ; ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಕಾಶಿಮಠಧೀಶರಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯ ತಿಥಿಯ ಆರಾಧನಾ ಮಹೋತ್ಸವವು ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕರಾದ ರವೀಂದ್ರ ಭಟ್ ನೇತೃತ್ವದಲ್ಲಿ ಸೋಮವಾರ ನಡೆಯಿತು. ಮಹೋತ್ಸವವು ಅನ್ನ ಸಂತರ್ಪಣೆ ಮತ್ತು ರಾತ್ರಿ ಪಲ್ಲಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು . ದೇವಳದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈ, ಸದಸ್ಯರಾದ ಮಟ್ಟಾರ್ ವಸಂತ್ ಕಿಣಿ , ಗಣೇಶ್ ಕಿಣಿ, ರೋಹಿತಾಕ್ಷ ಪಡಿಯಾರ್, ನಾರಾಯಣ ಪ್ರಭು , ಪುಂಡಲೀಕ ಕಾಮತ ,ಅಶೋಕ ಬಾಳಿಗಾ ,ದೇವದಾಸ ಪೈ ಹಾಗೂ ಜಿ ಎಸ್ ಬಿ ,ಸಮಾಜ ಭಾಂದವರು ಉಪಸ್ಥಿತರಿದ್ದರು.