ಮಹಿಳಾ ಉದ್ಯಮಿಗಳ ಪವರ್ ನ ಅನಾವರಣ: ಪವರ್ ಪರ್ಬ ವಿದ್ಯುಕ್ತ ಉದ್ಘಾಟನೆ

ಉಡುಪಿ: ಬಹುನಿರೀಕ್ಷಿತ ಮಹಿಳಾ ಉದ್ಯಮಿಗಳ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ “ಪವರ್ ಪರ್ಬ ” ವನ್ನು ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಉದ್ಘಾಟಿಸಿದರು. ಬೀಡಿನಗುಡ್ಡೆ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ಮಾರಾಟ ಮಳಿಗೆಗಳನ್ನು ಹಾಕಲಾಗಿದ್ದು ಇದರ ಉದ್ಘಾಟನೆಯನ್ನು ಶಾಸಕ ರಘುಪತಿ ಭಟ್ ನೆರವೇರಿಸಿದರು. ಈ ಬೃಹತ್ ಮೇಳದಲ್ಲಿ 125ಕ್ಕೂ ಹೆಚ್ಚು ಉತ್ಪನ್ನಗಳ/ ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ . ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ […]

ಮಂಗಳೂರು: ಗಾಂಜಾ ದಂಧೆಯಲ್ಲಿ ನಿರತ ವೈದ್ಯರು; ಬಯಲಾಗುತ್ತಿದೆ ಡ್ರಗ್ಸ್ ವ್ಯವಹಾರದ ಕರಾಳ ಮುಖಗಳು

ಮಂಗಳೂರು: ವೈದ್ಯಕೀಯ ಲೋಕದ ಡಗ್ಸ್ ನಂಟಿನ ಕರಾಳ ಮುಖಗಳು ಬಯಲಾಗುತ್ತಲೇ ಮಂಗಳೂರಿಗರಲ್ಲಿ ಆತಂಕ ಮನೆಮಾಡಿದೆ. ಮಂಗಳೂರು ನಗರ ಠಾಣೆಯ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಿಬ್ಬಂದಿ ಜನವರಿ 10 ರಂದು ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿ 10 ಜನರನ್ನು ಬಂಧಿಸಿದ್ದರು. ಜನವರಿ 12 ರಂದು ಇನ್ನೂ 3 ಜನರನ್ನು ಬಂಧಿಸಿದ್ದರು. ಇದೀಗ ಮತ್ತಿಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಒಟ್ಟು 15 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ 13 ಮಂದಿ ವೈದ್ಯರೇ ಇರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಬಗ್ಗೆ […]

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದ ಪ್ರಜಾಧ್ವನಿ ಬಸ್ ಯಾತ್ರೆ ಕುರಿತು ಪೂರ್ವಭಾವಿ ಸಭೆ

ಉಡುಪಿ: ಜ.22 ಆದಿತ್ಯವಾರದಂದು ಬೆಳಿಗ್ಗೆ 10.00 ಗಂಟಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರ ಉಪಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ “ಪ್ರಜಾಧ್ವನಿ ಯಾತ್ರೆ” ಬೃಹತ್ ಸಮಾವೇಶವು ನಡೆಯಲಿದ್ದು, ಈ ಬೃಹತ್ ಸಮಾವೇಶದ ರೂಪುರೇಷೆಯ ಬಗ್ಗೆ ಮಾಹಿತಿ ನೀಡಲು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಜ.14 […]

ಕೊಡವೂರು: ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಕೊಡವೂರು: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಕೊಡವೂರು ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ವಿವೇಕಾನಂದರ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ವಿಜಯ ಕೊಡವೂರು, ದೇಶ ಮತ್ತು ಧರ್ಮ ರಕ್ಷಣೆಗಾಗಿ ಜೀವನವನ್ನು ಮುಡುಪಾಗಿಟ್ಟ ಸ್ವಾಮಿ ವಿವೇಕಾನಂದರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಹಾಗಾಗಬೇಕಾದರೆ ಅವರ ಜೀವನ ಚರಿತ್ರೆಯನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಹಾನುಭಾವರ ಜಯಂತಿ ಆಚರಣೆಗಳು ಕೇವಲ ಅವರ ಭಾವಚಿತ್ರಕ್ಕೆ ಹೂ ಅರ್ಪಣೆ ಮಾಡಿ ದೀಪವನ್ನು ಬೆಳಗಿಸುವುದಕ್ಕೆ ಸೀಮಿತವಾಗಿರದೆ, ಅವರ […]

ಕಾಸರಗೋಡು: ಆಫ್ರಿಕನ್ ಹಂದಿ ಜ್ವರ ದೃಢ; 500ಕ್ಕೂ ಹೆಚ್ಚು ಹಂದಿಗಳ ಹತ್ಯೆಗೆ ಇಲಾಖೆ ಸಜ್ಜು

ಕಾಸರಗೋಡು: ಕಾಸರಗೋಡಿನ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟುಕುಕ್ಕೆ ಖಾಸಗಿ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ 500ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡ (ಆರ್‌ಆರ್‌ಟಿ) ಸಜ್ಜಾಗಿದೆ. ಜನವರಿ 4ರಂದು ಹಲವು ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಂಡವು ಜಮೀನಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿತ್ತು. ಮಾದರಿಗಳನ್ನು ಭೋಪಾಲ್‌ನ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿ ರೋಗ ದೃಢಪಟ್ಟಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶುವೈದ್ಯ ಅಲ್ವಿನ್ ವ್ಯಾಸ್ ಮತ್ತು […]