ಉಡುಪಿ: ಇಲ್ಲಿನ ಕೆಮ್ತೂರು ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಭಾನುವಾರದಂದು ಇಲ್ಲಿನ ಪ್ರಧಾನ ಅರ್ಚಕರಾಗಿ ನಿರಂತರವಾಗಿ ಸುಮಾರು 50 ವರ್ಷಗಳ ಕಾಲ (ಸುವರ್ಣ ಪೂಜಾ ಸೇವಾ ಮಹೋತ್ಸವ) ಸೇವೆ ಸಲ್ಲಿಸಿದ ವೇದಮೂರ್ತಿ ಸುಜಯ ಆಚಾರ್ಯ ಉದ್ಯಾವರ ಇವರನ್ನು ದೇವಾಲಯ ಸಭಾ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ, ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಮಂಡಳಿಯ ವತಿಯಿಂದ ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ, ಮಹಾ ಪೂಜೆ, ದರ್ಶನ ಸೇವೆ-ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಭಾರತನಾಟ್ಯ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆಯಲ್ಲಿ ವೇದಮೂರ್ತಿ ಗಣೇಶ್ ಭಟ್ ಕಾಪು, ವೇದಮೂರ್ತಿ ಕಮಲಾಕ್ಷ ಭಟ್ ಕಾಪು, ವೇದಮೂರ್ತಿ ರವೀಂದ್ರ ಭಟ್ ಶಿರ್ವ, ದರ್ಶನ ಪಾತ್ರಿ ಕೆ. ರಮೇಶ ಕಾಮತ್, ದೇವಳದ ಆಡಳಿತ ಮೊಕ್ತೇಸರ ರಾಮದಾಸ ಕಾಮತ್, ಆಡಳಿತ ಮಂಡಳಿಯ ಸದಸ್ಯ ಉಮೇಶ್ ಕಾಮತ್ , ವೆಂಕಟೇಶ ಕಾಮತ್, ನರಹರಿ ಕಾಮತ್, ವಿಠ್ಠಲದಾಸ ಕಾಮತ್, ಅನಂತ ಕಾಮತ್, ಪ್ರದೀಪ್ ಕಾಮತ್, ವಸಂತ ಕಾಮತ್, ಪದ್ಮನಾಭ ಕಾಮತ್, ವಾಸುದೇವ ಕಾಮತ್, ಜಿ ಎಸ್ ಬಿ ಮಹಿಳಾ/ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.