ಮಾದಕ ವಸ್ತು ಸೇವನೆ ಪ್ರಕರಣ: ಶಂಕಿತ ವ್ಯಕ್ತಿ ಪೋಲೀಸ್ ವಶಕ್ಕೆ

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವನೆ ಮಾಡಿಕೊಂಡು ಅಮಲಿನಲ್ಲಿದ್ದ ತಾಲೂಕಿನ ಮಹಮ್ಮದ್ ಶರೀಫ್ (25) ಎಂಬಾತನನ್ನು ಸೆ.8 ರಂದು ಸಂಜೆ 4:30 ಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮತ್ತು ಸಿಬ್ಬಂದಿಗಳು  ವಶಕ್ಕೆ ಪಡೆದುಕೊಂಡಿದ್ದು, ಸದ್ರಿ ವ್ಯಕ್ತಿಯು ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದ ಕಾರಣ ಆತನನ್ನು ಕಛೇರಿಗೆ ಕರೆತಂದು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರವರ ಮುಂದೆ ಹಾಜರುಪಡಿಸಲಾಗಿದ್ದು, ಸೆ. 08 ರಂದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮಹಮ್ಮದ್ ಶರೀಫ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿದ ಮೇರೆಗೆ ಅಪರಾಧ ಕಾಯ್ದೆಯಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.