ಜಿಲ್ಲಾ ಮಟ್ಟದ ಪ್ರಧಾನಿ ಮೋದಿ ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ/ಮಂಗಳೂರು: ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೆಲ್ಕಾರ್ ಯುವ ಸಂಗಮ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಮೋದಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಎ4 ಸೈಜ್ ಬಿಳಿ ಹಾಳೆಯಲ್ಲಿ ಪೆನ್ಸಿಲ್ ನಿಂದ ಚಿತ್ರ ರಚಿಸಬೇಕಿದ್ದು, ಆಯ್ಕೆಯಾದ ಚಿತ್ರಕ್ಕೆ ಸೂಕ್ತ ಬಹುಮಾನ ನೀಡಲಾಗುವುದು. ಚಿತ್ರದ ಕೆಳಭಾಗದಲ್ಲಿ ಸ್ಪರ್ಧಿಯ ಹೆಸರು- ವಿಳಾಸ, ಮೊಬೈಲ್ ನಂಬ್ರ ನಮೂದಿಸಬೇಕು. ಅನುಭವಿ ಚಿತ್ರಕಲಾವಿದರು ತೀರ್ಪುಗಾರರಾಗಿ ಭಾಗವಹಿಸಲಿದ್ದು, ಅವರ […]

ಶಿವಳ್ಳಿ: ಮಾಲೀಕರಿಲ್ಲದ ವೇಳೆ ಮನೆಯಿಂದ 64,000 ರೂ ಮೌಲ್ಯದ ಸೊತ್ತು ಕಳವು

ಶಿವಳ್ಳಿ: ಇಲ್ಲಿನ ಕುಂಜಿಬೆಟ್ಟುವಿನ ಎಲ್‌ಎಲ್‌ಆರ್‌ ಮಾರ್ಗದ ನಿವಾಸಿ ವೈಷ್ಣವಿ ಮಡಿ ತಮ್ಮ ತಂದೆ-ತಾಯಿ ಮತ್ತು ಕುಟುಂಬಸ್ಥರೊಂದಿಗೆ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಸೆ. 09 ರಿಂದ ಸೆ 10 ರವರೆಗೆ ರಾತ್ರಿ 9 ಗಂಟೆಯಿಂದ ಮರುದಿನ 10.45 ರೊಳಗೆ ಮನೆಯ ಮುಖ್ಯದ್ವಾರದ ಬಾಗಿಲನ್ನು ಕಳ್ಳರು ಆಯುಧದಿಂದ ಮುರಿದು ಒಳಪ್ರವೇಶಿಸಿ, ಮನೆಯ ದೇವರ ಕೋಣೆಯಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ದೇವರ ಪೀಠ, 50 ಗ್ರಾಂ ತೂಕದ ಬೆಳ್ಳಿಯ ಸಣ್ಣ ತಟ್ಟೆ, 150 ಗ್ರಾಂ ತೂಕದ ಬೆಳ್ಳಿಯ ಅರಶಿನ ಕುಂಕುಮ […]

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಬದಲಾದ ಚಿತ್ರಕಥೆ: ಆರ್ಯವರ್ಧನ್ ಪಾತ್ರಕ್ಕೆ ಅಫಘಾತ; ಅಭಿಮಾನಿಗಳಿಗೆ ಆಘಾತ

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕೆ ಅಪಘಾತ ಮಾಡಿ ಅನಿರುದ್ದ್ ಪಾತ್ರವನ್ನು ಕೊನೆಗೊಳಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದ ನಟ ಅನಿರುದ್ದ್ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಧಾರಾವಾಹಿಯಿಂದ ಹೊರಹಾಕಿದ್ದಲ್ಲದೆ, ಎರಡು ವರ್ಷಗಳ ಕಾಲ ಕಿರುತೆರೆಯಲ್ಲಿ ನಟಿಸದಂತೆ ನಿರ್ಬಂಧವನ್ನೂ ಹೇರಲಾಗಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಮತ್ತೆ ಅನಿರುದ್ದ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಕಥೆಯಲ್ಲಿ ಬದಲಾವಣೆ […]

ನಾರಾಯಣ ಗುರುಗಳ ತತ್ವಾದರ್ಶ ಪಾಲಿಸಿ ವಿಶ್ವಶಾಂತಿಗೆ ಮುಂದಡಿಯಿಡಬೇಕು: ಸಚಿವ ಸುನಿಲ್ ಕುಮಾರ್

ಉಡುಪಿ: ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನೇ ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ವಿವಿಧ ಧರ್ಮಗಳ ನಡುವೆ ನಡೆಯುತ್ತಿರುವ ವಾದವನ್ನು ಕೊನೆಗಾಣಿಸಿ, ವಿಶ್ವಶಾಂತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಿಲ್ಲವರ ಸೇವಾ ಸಂಘ ಬನ್ನಂಜೆ ಇವರ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ […]

ಕೋವಿಶೀಲ್ಡ್ ಲಸಿಕೆಯು ಪುರುಷ ಫಲವತ್ತತೆಯ ಸಾಮರ್ಥ್ಯಕ್ಕೆ ಹಾನಿಕಾರಕವಲ್ಲ: ಕಸ್ತೂರ್ಬಾ ವೈದ್ಯಕೀಯ ತಂಡದ ಸಂಶೋಧನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಫಲವತ್ತತೆ ತಜ್ಞರ ತಂಡವು ಇದೆ ಮೊದಲ ಬಾರಿಗೆ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದ ಪುರುಷರಲ್ಲಿ ವೀರ್ಯದ ಗುಣಮಟ್ಟದಲ್ಲಿನ ಬದಲಾವಣೆಗಳ ಪ್ರಾಯೋಗಿಕ ಸಂಶೋಧನೆ ನಡೆಸಿದೆ. ಸಂಶೋಧನಾ ವರದಿಯನ್ನು ಸೆ 5 ರಂದು ಯುಕೆ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಎಂಡ್ ಫರ್ಟಿಲಿಟಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ನಂತರ ಪುರುಷರಲ್ಲಿ ಫಲವತ್ತತೆ ನಶಿಸಿ ಹೋಗುತ್ತದೆ ಎಂಬ ವರದಿಗಳನ್ನು ಆಧರಿಸಿ ಬಹುತೇಕ ಪುರುಷರು ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಲಸಿಕೆಯು ಪುರುಷರ […]