ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೊತೆ ಹೋಲಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಸುಶ್ಮಿತಾ ಸೇನ್​

ಸುಶ್ಮಿತಾರ ಸಾಧನೆಗಳನ್ನು ಮಾಜಿ ವಿಶ್ವ ಸುಂದರಿಯರಾದ ಐಶ್ವರ್ಯಾ ರೈ ಬಚ್ಚನ್​​, ಪ್ರಿಯಾಂಕಾ ಚೋಪ್ರಾ ಅವರ ಸಾಧನೆಗಳಿಗೆ ಹೋಲಿಸುವ ಪತ್ರಕರ್ತರ ಪ್ರಯತ್ನಕ್ಕೆ ಪ್ರತಿಕ್ರಿಯಿಸುತ್ತಿರುವ ವಿಡಿಯೋವದು.ಸುಶ್ಮಿತಾ ಸೇನ್​ ಮುಖ್ಯಭೂಮಿಕೆಯ ಮುಂದಿನ ವೆಬ್​​ ಸೀರಿಸ್ ತಾಲಿ ಪ್ರಮೋಶನ್​ ವೇಳೆ ಹಳೇ ಘಟನೆಯನ್ನು ಮೆಲುಕು ಹಾಕಿ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ವೈ​ರಲ್​​ ಆಗುತ್ತಿರುವ ಹಳೇ ವಿಡಿಯೋ ಬಗ್ಗೆ ಮಾತನಾಡಿದ ನಟಿ,​ ಪತ್ರಕರ್ತರ ಪ್ರಶ್ನೆಗೆ ದಿಗ್ಭ್ರಮೆಗೊಂಡೆ. ಆದರೆ ಆ ವೇಳೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸಿದೆ. ಆ ಪ್ರಶ್ನೆ ಅಗೌರವಯುತವಾಗಿತ್ತು. ಅಂತಹ ಪ್ರಶ್ನೆಗಳು ಏಕೆ ಅಗತ್ಯ? ಎಂದು ಪ್ರಶ್ನಿಸಿದರು. ಪ್ರಚೋದನಕಾರಿ ಪ್ರಶ್ನೆಗಳ ಹೊರತಾಗಿಯೂ ಸುಶ್ಮಿತಾ ಅವರು ದೃಢವಾಗಿ, ಸರಿಯಾಗಿ ಪ್ರತಿಕ್ರಿಯೆ ಕೊಡಲು ಮುಂದಾದರು.

ಈ ವಿಡಿಯೋ ವೈರಲ್​ ಆಗುತ್ತಿದ್ದು, ಯಶಸ್ಸಿನ ಸ್ವರೂಪದ ಕುರಿತು ಆನ್​​ಲೈನ್​ನಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಡಿಯೋದ ಬಗ್ಗೆ ಇದೀಗ ಸುಶ್ಮಿತಾ ಸೇನ್​ ಅವರು ಬಹಳ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ.ಮಾಜಿ ವಿಶ್ವ ಸುಂದರಿ, ಬಾಲಿವುಡ್​​ ಬಹುಬೇಡಿಕೆ ತಾರೆ ಸುಶ್ಮಿತಾ ಸೇನ್​ ಅವರ ಹಳೇ ವಿಡಿಯೋವೊಂದು ಆನ್​ಲೈನ್​ನಲ್ಲಿ ವೈರಲ್​ ಆಗಿದೆ.ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೊತೆ ಹೋಲಿಕೆ ಮಾಡಿದ ವಿಚಾರವಾಗಿ ಬಾಲಿವುಡ್​ ತಾರೆ ಸುಶ್ಮಿತಾ ಸೇನ್ ಪ್ರತಿಕ್ರಿಯಿಸಿದ್ದಾರೆ.

”ನಮ್ಮ ದೇಶಕ್ಕೆ ಐಶ್ವರ್ಯಾ ರೈ ಬಚ್ಚನ್​​, ಪ್ರಿಯಾಂಕಾ ಚೋಪ್ರಾ ಅವರ ಕೊಡುಗೆ ಬಗ್ಗೆ ಉಲ್ಲೇಖಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಮುಂದಾದೆ. ಅವರ ಕೊಡುಗೆ, ಸೇವೆ ನಮಗೆ ದೊಡ್ಡ ವಿಷಯ. ನಾನು ನನ್ನನ್ನು ವಿನಮ್ರವಾಗಿ ತೋರಿಲು ಪ್ರಯತ್ನಿಸುತ್ತಿಲ್ಲ. ಇದೇ ಸತ್ಯಾಂಶ. ಅದು ವಾಸ್ತವಾಂಶ, ಈ ಮೂಲಕ ಇಂತಹ (ನಟರನ್ನು ಹೋಲಿಕೆ ಮಾಡೋದು) ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುತ್ತಾರೆ. ಏಕೆಂದರೆ ಅವರು ಸ್ವತಃ ಮುಜುಗರಕ್ಕೊಳಗಾಗುತ್ತಾರೆ” – ಸುಶ್ಮಿತಾ ಸೇನ್​.

ಒಬ್ಬರ ಮೂಲ ಮತ್ತು ಆರಂಭಕ್ಕೆ ಕೃತಜ್ಞತೆಯ ಮಹತ್ವವನ್ನು ನಟಿ ಸುಶ್ಮಿತಾ ಸೇನ್​ ಒತ್ತಿ ಹೇಳಿದರು. ಐಶ್ವರ್ಯಾ ರೈ ಬಚ್ಚನ್​​, ಪ್ರಿಯಾಂಕಾ ಚೋಪ್ರಾ ಗಣನೀಯ ಸಾಧನೆಗಳಿಂದಾಗಿ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು. ಪ್ರಿಯಾಂಕಾ ಚೋಪ್ರಾ ಅವರ ಮಹತ್ತರ ಸಾಧನೆ, ಕೊಡುಗೆ ಪ್ರಭಾವದ ಕುರಿತು ವಿಶೇಷವಾಗಿ ಗುಣಗಾನ ಮಾಡಿದರು.ವೈರಲ್ ವಿಡಿಯೋದಲ್ಲಿ ಪತ್ರಕರ್ತರು ನಟಿ ಸುಶ್ಮಿತಾ ಸೇನ್​ ಅವರ ಸಾಧನೆಗೆಳನ್ನು ಐಶ್ವರ್ಯಾ, ಪ್ರಿಯಾಂಕಾರ ಸಾಧನೆಗಳಿಗೆ ಹೋಲಿಸಿದ್ದಾರೆ. ಆದ್ರೆ ಸುಶ್ಮಿತಾರ ಶಾಂತ ಸ್ವರೂಪ ಪ್ರತಿಕ್ರಿಯೆ ಅವರ ಪ್ರಬುದ್ಧತೆಯ ಪ್ರದರ್ಶನ ಮಾಡಿಸಿತು.
ಇತರರ ಯಶಸ್ಸಿನ ಆಧಾರದ ಮೇರೆಗೆ ಓರ್ವರ ಸಾಧನೆಗಳನ್ನು ಮೌಲ್ಯಮಾಪನ ಮಾಡುವುದು ಸೂಕ್ತವಲ್ಲ. ಇತರರ ಸಾಧನೆಗಳನ್ನು ಹೋಲಿಕೆ ಮಾಡುವ ಬದಲು, ಅವರ ಸಾಧನೆಗಳ ಗಮನಾರ್ಹ ಅಂಶಗಳನ್ನು ಆಚರಿಸೋಣ ಎಂದು ಸಲಹೆಯಿತ್ತರು. ಅತ್ಯುತ್ತಮ ಸಾಧನೆಗಳನ್ನು ಎತ್ತಿ ಹಿಡಿಯೋಣ, ಏಕೆಂದರೆ ಅವು ಜಗತ್ತಿಗೆ ಸಕಾರಾತ್ಮಕ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು.