ಆಗಸ್ಟ್​ 23, ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವ ‘ವಿಕ್ರಮ್​’

ನವದೆಹಲಿ : ಇನ್ನು ಮೂರೇ ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್​​ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ.ಚಂದ್ರಯಾನ-3 ನೌಕೆಯನ್ನು ಚಂದಮಾಮನ ದಕ್ಷಿಣ ಧ್ರುವದ ಮೇಲೆ ಇಳಿಸುವ ದಿನಾಂಕ, ಮುಹೂರ್ತವನ್ನು ಇಸ್ರೋ ಅಧಿಕೃತವಾಗಿ ಘೋಷಿಸಿದೆ. ಐತಿಹಾಸಿಕ ಕ್ಷಣಗಳ ನೇರಪ್ರಸಾರ ಕೂಡ ಇರಲಿದೆ ಎಂದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್​ ಆಗಸ್ಟ್ 23 […]

ಉತ್ತರಾಖಂಡದಲ್ಲಿ ಭೀಕರ ಅಪಘಾತ : ಕಂದಕಕ್ಕೆ ಉರುಳಿ ಬಿದ್ದ ಯತ್ರಾರ್ಥಿಗಳ ಬಸ್

ಉತ್ತರಕಾಶಿ(ಉತ್ತರಾಖಂಡ): ಇಲ್ಲಿನ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುಜರಾತ್‌ನಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಗಂಗೋತ್ರಿ ಹೆದ್ದಾರಿಯ ಗಂಗ್ನಾನಿ ಎಂಬಲ್ಲಿ ಆಳವಾದ ಕಮರಿಗೆ ಬಿದ್ದಿದೆ. ಬಸ್ ಗಂಗೋತ್ರಿಧಾಮದಿಂದ ಉತ್ತರಕಾಶಿ ಕಡೆಗೆ ಹೋಗುತ್ತಿತ್ತು. ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ಖಚಿತಪಡಿಸಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಭಾನುವಾರ ಸಂಜೆ 4:15 ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಉತ್ತರಾಖಂಡದಲ್ಲಿ ಖಾಸಗಿ […]

ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ಸಮೂಹಕ್ಕೆ ಕರೆ ನೀಡಿದ್ದಾರೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಹಮ್ಮಿಕೊಂಡಿದ್ದ ದೇವರಾಜು ಅರಸು ಅವರ 108 ನೇ ಜನ್ಮ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ […]

ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೊತೆ ಹೋಲಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಸುಶ್ಮಿತಾ ಸೇನ್​

ಸುಶ್ಮಿತಾರ ಸಾಧನೆಗಳನ್ನು ಮಾಜಿ ವಿಶ್ವ ಸುಂದರಿಯರಾದ ಐಶ್ವರ್ಯಾ ರೈ ಬಚ್ಚನ್​​, ಪ್ರಿಯಾಂಕಾ ಚೋಪ್ರಾ ಅವರ ಸಾಧನೆಗಳಿಗೆ ಹೋಲಿಸುವ ಪತ್ರಕರ್ತರ ಪ್ರಯತ್ನಕ್ಕೆ ಪ್ರತಿಕ್ರಿಯಿಸುತ್ತಿರುವ ವಿಡಿಯೋವದು.ಸುಶ್ಮಿತಾ ಸೇನ್​ ಮುಖ್ಯಭೂಮಿಕೆಯ ಮುಂದಿನ ವೆಬ್​​ ಸೀರಿಸ್ ತಾಲಿ ಪ್ರಮೋಶನ್​ ವೇಳೆ ಹಳೇ ಘಟನೆಯನ್ನು ಮೆಲುಕು ಹಾಕಿ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ವೈ​ರಲ್​​ ಆಗುತ್ತಿರುವ ಹಳೇ ವಿಡಿಯೋ ಬಗ್ಗೆ ಮಾತನಾಡಿದ ನಟಿ,​ ಪತ್ರಕರ್ತರ ಪ್ರಶ್ನೆಗೆ ದಿಗ್ಭ್ರಮೆಗೊಂಡೆ. ಆದರೆ ಆ ವೇಳೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸಿದೆ. ಆ ಪ್ರಶ್ನೆ ಅಗೌರವಯುತವಾಗಿತ್ತು. ಅಂತಹ ಪ್ರಶ್ನೆಗಳು […]

ಅಡೋಬ್​ ಸಹ-ಸಂಸ್ಥಾಪಕ ಜಾನ್ ವಾರ್ನಾಕ್​ ವಿಧಿವಶ

ಸ್ಯಾನ್ ಫ್ರಾನ್ಸಿಸ್ಕೋ : ಚಾರ್ಲ್ಸ್ ಗೆಶ್ಕೆ ಅವರೊಂದಿಗೆ ಸೇರಿಕೊಂಡು ವಾರ್ನಾಕ್ 1982 ರಲ್ಲಿ ಅಡೋಬ್ ಅನ್ನು ಸಹ-ಸ್ಥಾಪಿಸಿದರು. ಇವರಿಬ್ಬರೂ ಅದಕ್ಕೂ ಮುನ್ನ ಜೆರಾಕ್ಸ್​ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವರು ಮೊದಲಿಗೆ ತಯಾರಿಸಿದ ಅಡೋಬ್ ಸ್ಕ್ರಿಪ್ಟ್​​ ಎಂಬ ಸಾಫ್ಟವೇರ್​ ಡೆಸ್ಕ್​ ಟಾಪ್​ ಪಬ್ಲಿಶಿಂಗ್​​ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅದ್ಭುತ ತಂತ್ರಜ್ಞಾನವಾಗಿತ್ತು. ವಾರ್ನಾಕ್ 2000 ರವರೆಗೆ ಈ ಕಂಪನಿಯ ಸಿಇಒ ಆಗಿ ಸೇವೆ ಸಲ್ಲಿಸಿದರು ಮತ್ತು ಮಂಡಳಿಯ ಅಧ್ಯಕ್ಷರಾಗಿ ಮುಂದುವರೆದರು. ಸಾಫ್ಟ್ ವೇರ್ ವಲಯದ ದಿಗ್ಗಜ ಕಂಪನಿ […]