ಬಾಲಿವುಡ್ ನಲ್ಲಿ “ಅಣ್ಣ” ಎಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿಯವರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ‘ಧಾರಾವಿ ಬ್ಯಾಂಕ್’ ಸರಣಿಯೊಂದಿಗೆ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಸರಣಿಯನ್ನು ಸಮಿತ್ ಕಕ್ಕಡ್ ಅವರು ನಿರ್ದೇಶಿಸಿದ್ದಾರೆ.
ಧಾರಾವಿ ಬ್ಯಾಂಕ್ ಸರಣಿಯಲ್ಲಿ ಸುನಿಲ್ ‘ತಲೈವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಕೂಡಾ ನಟಿಸಲಿದ್ದಾರೆ. ನಟಿ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿದ್ದಾರೆ.
ಧಾರಾವಿ ಬ್ಯಾಂಕ್ ಅನ್ನು ಮುಂಬೈನ ಅತ್ಯಂತ ಸಂಕೀರ್ಣ ಮತ್ತು ಜನನಿಬಿಡ ಪ್ರದೇಶವಾದ ಪ್ರಪಂಚದ ಅತ್ಯಂತ ದೊಡ್ಡ ಕೊಳಚೆಗೇರಿ ಖ್ಯಾತಿಯ ಧಾರಾವಿಯ ಮೇಲೆ ಚಿತ್ರಿಸಲಾಗಿದೆ.
ಧಾರಾವಿ ಬ್ಯಾಂಕ್ ಒಂದು ಸೇಡು ತೀರಿಸಿಕೊಳ್ಳುವ ಅನನ್ಯ ಅಪರಾಧ ನಾಟಕ ಸರಣಿಯಾಗಿದ್ದು ಅದು ನಿಮ್ಮನ್ನು ಕೊನೆಯವರೆಗೂ ಊಹಿಸುವಂತೆ ಮಾಡುತ್ತದೆ. ಕಥೆಯನ್ನು ಆಧರಿಸಿದ ಪರಿಸರದ ಸತ್ಯಾಸತ್ಯತೆಯನ್ನು ರಚಿಸಲು ನಾವೆಲ್ಲರೂ ನಿಜವಾಗಿಯೂ ಶ್ರಮಿಸಿದ್ದೇವೆ ಮತ್ತು ಈ ಕಥೆಗೆ ಜೀವ ತುಂಬಲು ಅಂತಹ ಸಮರ್ಪಣಾ ಭಾವದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದೇವೆ ಎಂದು ಎಂಎಕ್ಸ್ ಪ್ಲೇಯರ್ ನ ಮುಖ್ಯ ಕಂಟೆಂಟ್ ಆಫೀಸರ್ ಗೌತಮ್ ತಲ್ವಾರ್ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನನ್ನು ಹೊಸ ಅವತಾರದಲ್ಲಿ ಕಂಡ ಅಭಿಮಾನಿಗಳು ಹರ್ಷವ್ಯಕ್ತ ಪಡಿಸುತ್ತಿದ್ದಾರೆ.