ನಿಮ್ಮ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಡ್ರೀಮ್ ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ವತಿಯಿಂದ “ಸಮ್ಮರ್ ಕಿಡ್ಸ್ ಕ್ಯಾಂಪ್”

ಮಣಿಪಾಲ: ನಿಮ್ಮ ಮಕ್ಕಳು ಬೇಸಿಗೆ ರಜೆಯನ್ನು ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಕಳೆಯಲು ಡ್ರೀಮ್ ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ವತಿಯಿಂದ ‘ಸಮ್ಮರ್ ಕಿಡ್ಸ್ ಕ್ಯಾಂಪ್’ಮೇ 4ರಿಂದ 15 ರವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ ನಗರದಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಮಕ್ಕಳಿಗಾಗಿ ಕ್ರೋಶೆಟ್ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ಸೇರಿದಂತೆ ಹಲವು ಸೃಜನಾತ್ಮಕ ತರಬೇತಿಗಳನ್ನು ನೀಡಲಾಗುತ್ತದೆ.

ಮಕ್ಕಳ ಕೈಚಳಕ, ಕಲ್ಪನಾ ಶಕ್ತಿ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಅವರನ್ನು ಕಲೆಗಳತ್ತ ಆಕರ್ಷಿಸುವ ದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಲು ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ 81231 63932 ಸಂಖ್ಯೆಗೆ ಸಂಪರ್ಕಿಸಬಹುದು.