ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ‘ಶಿಕ್ಷಣ ಗ್ಯಾರಂಟಿ’ ಘೋಷಿಸಿದ ಸರಕಾರ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಹೊಸ ಜಾಹೀರಾತು ಅಭಿಯಾನ ಆರಂಭಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಾಗಿ ‘ಶಿಕ್ಷಣ ಗ್ಯಾರಂಟಿ’ ಘೋಷಿಸಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಮಹತ್ವದ ಹಂತಗಳಾಗಿವೆ. ಇತ್ತೀಚೆಗೆ ಪ್ರಕಟವಾದ ಫಲಿತಾಂಶಗಳಲ್ಲಿ ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ತೇರ್ಗಡೆ ಪ್ರಮಾಣ ಕಂಡುಬಂದಿದೆ. ಈ ವರ್ಷ ಸರ್ಕಾರಿ ಶಾಲೆ-ಕಾಲೇಜುಗಳೂ ಉತ್ತಮ ಸಾಧನೆ ಮಾಡಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇ.94.10 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.86.48 ಫಲಿತಾಂಶ ದಾಖಲಾಗಿದೆ. […]

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಬೆಂಗಳೂರು: ಕೆಐಎಡಿಬಿ ಭೂಸ್ವಾಧೀನ ಕಾರ್ಯಕ್ಕೆ ಸಂಬಂಧಿಸಿದ ಬಾಕಿ ಕಂದಾಯ ಪ್ರಕರಣವನ್ನು ಇತ್ಯರ್ಥಪಡಿಸಲು 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಆಯುಕ್ತರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ. ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿ ನಾಗಪ್ರಶಾಂತ್ ಅವರು ಬೆಂಗಳೂರಿನ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ವಿಶೇಷ ಸಹಾಯಕ ಆಯುಕ್ತ (ಉತ್ತರ) ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ-1 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು […]

ಗಿಗ್ ಕಾರ್ಮಿಕರಿಗೆ ಗುಡ್ ನ್ಯೂಸ್, ಪಿಂಚಣಿ, ಮಾತೃತ್ವ ಸೌಲಭ್ಯ ಸೇರಿ ಭದ್ರತೆ ಯೋಜನೆ ಜಾರಿಗೆ ಮುಂದಾದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದ ಗಿಗ್ ಕಾರ್ಮಿಕರಿಗೆ ಶೀಘ್ರದಲ್ಲೇ ಸಾಮಾಜಿಕ ಭದ್ರತಾ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದೆ. ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದರೆ ಪಿಂಚಣಿ, ಮಹಿಳಾ ಕಾರ್ಮಿಕರಿಗೆ ಮಾತೃತ್ವ ಸೌಲಭ್ಯ ಹಾಗೂ ಕೆಲವು ತಿಂಗಳ ಆರ್ಥಿಕ ನೆರವು ನೀಡುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅರ್ಹತೆಯನ್ನು 90 ದಿನಗಳ ಅವಧಿಯಲ್ಲಿ ಕನಿಷ್ಠ ಗಿಗ್ ಕೆಲಸಗಳನ್ನು ಪೂರ್ಣಗೊಳಿಸಿರುವ ಆಧಾರದಲ್ಲಿ ನಿಗದಿಪಡಿಸುವ ಸಾಧ್ಯತೆ ಇದೆ. ಕಾರ್ಮಿಕ ಇಲಾಖೆಯು ಅಂತಾರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಘ (ISSA) ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಜೊತೆಗೆ ಸೇರಿ ಸಮಗ್ರ […]

ಕುಂದಾಪುರ: ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಲಾರಿಗೆ ಪ್ರವಾಸಿ ಬಸ್ ಢಿಕ್ಕಿ: ಇಬ್ಬರು ಮೃತ್ಯು, ಹಲವರಿಗೆ ಗಾಯ!

ಉಡುಪಿ: ಕಾಲೇಜು ಪ್ರವಾಸ ಹೊರಟಿದ್ದ ಬಸ್ಸೊಂದು ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ತ್ರಾಸಿಯ ಮರವಂತೆ ಬೀಚ್ ಬಳಿ ಇಂದು ಮಧ್ಯಾಹ್ನ ವೇಳೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ಹಂತದ ಬಿಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ 24 ವಿದ್ಯಾರ್ಥಿ, 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು. ಇವರೆಲ್ಲ ಮುರ್ಡೇಶ್ವರಕ್ಕೆ ತೆರಳಿದ್ದು, ಅಲ್ಲಿಂದ ಇಂದು […]

ಕ್ರೈಸ್ಟ್ ಕಿಂಗ್ ದ್ವಿತೀಯ ಪಿಯುಸಿ ಮರುಮೌಲ್ಯಮಾಪನ: ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ಪ್ರಜ್ವಲ್ ಶೆಟ್ಟಿ ಉಡುಪಿ ಜಿಲ್ಲೆಗೆ ದ್ವಿತೀಯ

ಕಾರ್ಕಳ: ದ್ವಿತೀಯ ಪಿಯುಸಿ ಮರುಮೌಲ್ಯಮಾಪನದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಜ್ಯ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಶೆಟ್ಟಿ ೫೯೭ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಇದಕ್ಕೂ ಮೊದಲು ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದ ಪ್ರಜ್ವಲ್ ಶೆಟ್ಟಿ ವ್ಯವಹಾರ ಅಧ್ಯಯನ ವಿಷಯದಲ್ಲಿ ಒಂದು ಹೆಚ್ಚವರಿ ಅಂಕವನ್ನು ಪಡೆಯುವ ಮೂಲಕ ರ‍್ಯಾಂಕ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾನೆ. ಇವನು ಇರ್ವತ್ತೂರು ನಿವಾಸಿ ರಿಕ್ಷಾ ಚಾಲಕ ಶ್ರೀ ಪ್ರಕಾಶ್ ಶೆಟ್ಟಿ […]