ಬೇಸಿಗೆಯಲ್ಲಿ ಆರೋಗ್ಯ ಕಾಪಾಡಲು ಏನೇನ್ ಮಾಡ್ಬೇಕು?: ನೀವಿದನ್ನು ಪಾಲಿಸದೇ ಇದ್ರೆ ನಿಮ್ ಆರೋಗ್ಯ ಢಮಾರ್ !

ಮತ್ತೆ ಬೇಸಿಗೆ ಬಂದಿದೆ. ಗಂಠಲು ಒಣಗಿ ತಂಪಾದ ಪಾನೀಯಗಳಿಗೆ, ಐಸ್ ಕ್ರೀಮ್ ಗಳಿಗೆ ಮೊರೆಹೋಗುವ ಕಾಲವಿದು. ಸೆಕೆ ಆಗುತ್ತಂತ ಸಿಕ್ಕಿದ್ದನ್ನು ಕುಡಿದರೆ, ತಿಂದರೆ ಕೂಡ ತುಂಬಾ ಡೇಂಜರ್. ಬೇಸಿಗೆಯಲ್ಲಿ  ನಮ್ಮ ಆರೋಗ್ಯ ಕಾಪಾಡೋದು ಒಂದು ದೊಡ್ಡ ಸವಾಲು. ಇಲ್ಲಿ ಬೇಸಿಗೆಗೆ ನಾವು ಯಾವ್ ತರ ಆಹಾರ ಸೇವಿಸ್ಬೇಕು? ಬೇಸಿಗೆಯಲ್ಲಿ ನಮ್ಮ ಜೀವನ ಶೈಲಿ ಹೇಗಿರ್ಬೇಕು? ಎನ್ನುವ ಬಗ್ಗೆ ಒಂದಷ್ಟು ಟಿಪ್ಸ್ ಕೊಡಲಾಗಿದೆ. ಫಾಲೋ ಮಾಡಿದರೆ  ಈ ಬೇಸಿಗೆಯಲ್ಲಿ ಸೇಫಾಗಿರ್ತೀರಾ ಅಷ್ಟೆ. ಇಲ್ಲಾಂದ್ರೆ ನಿಮ್ ಆರೋಗ್ಯ ಢಮಾರ್ ಆಗೋದು ಗ್ಯಾರಂಟಿ. ವೈದ್ಯೆ ಹರ್ಷಾ ಕಾಮತ್ ಕೊಟ್ಟ ಟಿಪ್ಸ್ ಗಳು ಇಲ್ಲಿವೆ ನೋಡಿ.

*ಬೇಸಿಗೆಯಲ್ಲಿ ಪಿತ್ತದೋಷ ಅಧಿಕವಿರುತ್ತದೆ ಮತ್ತು ನಮ್ಮ ದೇಹ ಬಲ ಹಾಗೂ ಜೀರ್ಣ ಶಕ್ತಿ ಕಮ್ಮಿಯಿರುತ್ತದೆ. ಆದ್ದರಿಂದ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು. ಕೊತ್ತಂಬರಿ, ಜೀರಿಗೆ, ಹಳದಿ, ಮೆತ್ತಿ, ಈರುಳ್ಳಿ, ಬೆಳ್ಳುಳ್ಳಿ, ಬಾರ್ಲಿ ಇದನ್ನೆಲ್ಲಾ ಅಡುಗೆಯಲ್ಲಿ ಬಳಸುವುದು ಒಳ್ಳೆಯದು. ಬಾರ್ಲಿ ನಮ್ಮ ಇಮ್ಯುನಿಟಿ ಯನ್ನು ಹೆಚ್ಚಿಸುತ್ತದೆ.

ಕಂಜೂಸ್ ಆಗಬೇಡಿ, ಜ್ಯೂಸ್ ಕುಡೀರಿ:

*ನೀರು ಚೆನ್ನಾಗಿ ಕುಡಿಯಬೇಕು. ಒಂದು ಕಪ್ ಬೆಚ್ಚಗಿನ ನೀರಿಗೆ  ಎರಡು ಚಮಚ ಜೇನುತುಪ್ಪ ಹಾಕಿ ಕುಡಿಯಿರಿ. ಊಟವಾದ ಮೇಲೆ ಶುಂಠಿಯನ್ನು ಸೇವಿಸಿರಿ. ಇದು ಜೀರ್ಣಕ್ಕೆ ಒಳ್ಳೆಯದು. ಎಳನೀರು, ಮಜ್ಜಿಗೆ, ಕೋಕಂ, ಫ್ರೂಟ್ ಜ್ಯೂಸ್, ರಾಗಿ ಮಾಲ್ಟ್,  ಹರ್ಬಲ್ ಟೀ , ನೀರಿನಂಶ ಅಧಿಕವಿರುವ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿರಿ.

ಆಹಾ ಬೇವಿನ ಸ್ನಾನ :

ಈ ಕಾಲದಲ್ಲಿ ಶೀತ, ಕೆಮ್ಮು , ಸೈನಸೈಟಿಸ್ ಕಾಡುವುದರಿಂದ ನಾವು ನೀಲಗಿರಿ ಎಣ್ಣೆ ಹಾಕಿ ಸ್ಟೀಮ್ ಇನ್ಹಲೇಷನ ಮಾಡಿದ್ರೆ ಉತ್ತಮ . ಸ್ಕಿನ್ ಅಲರ್ಜಿಯನ್ನು ತಡೆಗಟ್ಟಲು ಸ್ನಾನದ ನೀರಿಗೆ  ಒಂದು ಮುಷ್ಟಿ ಬೇವಿನ ಎಲೆ ಅಥವಾ ನಾಲ್ಕೈದು ಡ್ರಾಪ್ಸ್ ಬೇವಿನ ಎಣ್ಣೆ ಹಾಕಿ ಆ ನೀರನ್ನು ಸ್ನಾನಕ್ಕೆ ಉಪಯೋಗಿಸಿರಿ. ದೇಹಕ್ಕೆ ಚಂದನದ ಲೇಪವನ್ನು ಹಚ್ಚಬಹುದು,  ಇದರಿಂದ  ದೇಹಕ್ಕೆ ಹಾಗೂ ಚರ್ಮಕ್ಕೆ ಹಿತ.

ಪ್ರಾಣಾಯಾಮ ಮಾಡಿದ್ರೆ ಲೈಫು ಆರಾಮ:

ದಿನನಿತ್ಯ ಇಪ್ಪತ್ತು ನಿಮಿಷ ಪ್ರಾಣಾಯಾಮ ಹಾಗೂ ಯೋಗಾಸನಗಳನ್ನು ಮಾಡಿ. ತ್ರಿಕೋಣಾಸನ, ಪಶ್ಚಿಮೋತ್ತಾಸನ, ಪವನ ಮುಕ್ತಾಸನ, ಮತ್ಸೇಂದ್ರಿಯಾಸನ ಈ ಆಸನಗಳನ್ನು ಮಾಡುವುದರಿಂದ ನಮ್ಮ ಜೀರ್ಣಶಕ್ತಿ ವೃದ್ಧಿಸುತ್ತದೆ.

ಕಾಟನ್ ಬಟ್ಟೆಯನ್ನು ಧರಿಸಿರಿ, ಮಧ್ಯಾಹ್ನ ಇಪ್ಪತ್ತು ನಿಮಿಷ ನಿದ್ದೆ ಮಾಡಬಹುದು. ಬೆಳಿಗ್ಗೆ ಹತ್ತರಿಂದ ಸಾಯಂಕಾಲ ನಾಲ್ಕರವರೆಗೆ ಹೊರಗೆ ಬಿಸಿಲಿನಲ್ಲಿ ತಿರುಗಾಡಬೇಡಿ.  ಹೋಗಲೇ ಬೇಕಾದರೆ ಹ್ಯಾಟ್ ಅಥವಾ ಛತ್ರಿಯನ್ನು ಉಪಯೋಗಿಸಿ ಹಾಗೂ ಕಣ್ಣಿಗೆ ಗಾಗಲ್ಸ್ ಅನ್ನು ಹಾಕಿದರೆ ಒಳ್ಳೆಯದು.

ಜಂಕ್ ಫುಡ್ ತಿಂದು ಮಂಕಾಗ್ಬೇಡಿ

*ಅಧಿಕ  ವ್ಯಾಯಾಮ, ಸಿಂಥೆಟಿಕ್ ಬಟ್ಟೆ ಧರಿಸುವುದು, ಜಂಕ್ ಫುಡ್, ಜಿಡ್ಡಿನ ಆಹಾರ, ತಣ್ಣೀರು, ಸ್ವಿಟಸ,  ಸಾಫ್ಟ್ ಡ್ರೀಂಕ್,  ಉಪ್ಪು, ಹುಳಿ ಜಾಸ್ತಿಯಿರುವ ಆಹಾರವನ್ನು ಸೇವಿಸಬಾರದು.

ಡಾ .ಹರ್ಷ ಕಾಮತ್