ನಾವು ಮಂಗಳೂರು ನಗರದಲ್ಲಿ ಹೊರಾಂಗಣ ಮತ್ತು ಒಳಾಂಗಣ ಎರಡರಲ್ಲೂ ಬೆಳೆಯುತ್ತಿರುವ ಕ್ರಿಕೆಟ್ ಕೋಚಿಂಗ್ ಫೆಸಿಲಿಟಿಗಳಲ್ಲಿ ಒಂದಾಗಿ ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ. ನಮ್ಮ ವೃತ್ತಿಪರ ತರಬೇತುದಾರರ ಪರಿಣತಿ ಮತ್ತು ಅನುಭವದೊಂದಿಗೆ ಕ್ರಿಕೆಟ್ ಉತ್ಸಾಹಿ ಹುಡುಗರು ಮತ್ತು ಹುಡುಗಿಯರಿಗೆ 360 ಡಿಗ್ರಿ ಕ್ರಿಕೆಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಒದಗಿಸುತ್ತೇವೆ.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಇನ್ ಇಂಡಿಯಾ ಇದರ ಅರ್ಹ ತರಬೇತುದಾರ ಸ್ಯಾಮ್ಯುಯೆಲ್ ಜಯರಾಜ್ ಮುತ್ತು ಮತ್ತು
ದೇವದಾಸ್ ನಾಯಕ್, ಪ್ರಸ್ತುತ 22 ಯಾರ್ಡ್ಸ್ ಸಂಸ್ಥೆಯಲ್ಲಿ ಫಿಸಿಯೋಥೆರಪಿಸ್ಟ್ ಗಳಾಗಿದ್ದಾರೆ ಮತ್ತು ಮೈಂಡ್ ಪರ್ಫಾರ್ಮೆನ್ಸ್ ಕೋಚ್ ಸೇರಿದಂತೆ ವೃತ್ತಿಪರ ತರಬೇತುದಾರರು ತಂಡವನ್ನು ಮುನ್ನಡೆಸುತ್ತಿದ್ದಾರೆ.
ಸಂಸ್ಥೆಯ ತರಬೇತುದಾರರು ಪ್ರಸ್ತುತ ಏSಅಂ ಅಡಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ವಯೋಮಾನದ ಪಂದ್ಯಾವಳಿಗಳಲ್ಲಿ ಆಡುತ್ತಿರುವ ಆಟಗಾರರಿಗೆ ತರಬೇತಿ ನೀಡಿದ್ದಾರೆ ಮತ್ತು ಪ್ರಸ್ತುತ ಕರ್ನಾಟಕ ರಣಜಿ ಟ್ರೋಫಿ ತಂಡ ಮತ್ತು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಎಂದಿನಂತೆ, ಈ ವರ್ಷವೂ ಸಂಸ್ಥೆಯ ಬೇಸಿಗೆ ವಿಶೇಷತೆಯೊಂದಿಗೆ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಉತ್ಸಾಹಿ ಮಕ್ಕಳಿಗೆ ತರಬೇತಿಯನ್ನು ನೀಡಲು ಸಜ್ಜಾಗಿದೆ.
ಬೇಸಿಗೆ ಕ್ರಿಕೆಟ್ ಶಿಬಿರ-2023 (ಆರಂಭಿಕರಿಗೆ ಮಾತ್ರ)
ಅವಧಿ: 01 ಏಪ್ರಿಲ್ 2023 ರಿಂದ 31 ಮೇ 2023, ಸೋಮವಾರದಿಂದ ಶುಕ್ರವಾರದವರೆಗೆ
ಸಂಪರ್ಕ: +91 8660572300
ನಿಯಮಿತ ಕ್ರಿಕೆಟ್ ಶಿಬಿರ/ಕೌಶಲ್ಯ ಅವಧಿಗಳು ಪ್ರಸ್ತುತ ಸಾಮಾನ್ಯ ವೇಳಾಪಟ್ಟಿಯಂತೆ 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್-ಔಟ್ಡೋರ್ಸ್, ಮಿಲಾಗ್ರಿಸ್ ಗ್ರೌಂಡ್, ಮೋತಿಮಹಲ್ ಎದುರುಗಡೆ, ಹಂಪನಕಟ್ಟೆ, ಮಂಗಳೂರು, ಇಲ್ಲಿ ಹಾಗೂ 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್-ಇಂಡೋರ್ಸ್, ಸಾಯಿಬೀನ್ ಕಾಂಪ್ಲೆಕ್ಸ್, 4ನೇ ಮಹಡಿ, ಲಾಲ್ಭಾಗ್, ಮಂಗಳೂರು ಇಲ್ಲಿ ನಡೆಯುತ್ತಿವೆ.