ಕುಶಾಲನಗರ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 10800 ಯಜ್ಞಕರ್ತರನ್ನು ನೋಂದಣಿ ಕಾರ್ಯಕ್ಕೆ ಶ್ರೀಪಾದರ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಿರಿಯ ಸ್ವಾಮಿಜಿಗಳಾದ ಸುಶೀಂದ್ರ ತೀರ್ಥರು ಉಪಸ್ಥಿತರಿದ್ದ ಈ ಬೃಹತ್ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಕುಶಾಲನಗರದ ಸಂಕರ್ಷಣ ಪ್ರಖಂಡ ಕೋಟಿ ಗೀತಾ ಲೇಖನ ಯಜ್ಞ ಪರಿವಾರ ಆಯೋಜಿಸಿತ್ತು. ಡಿಸೆಂಬರ್ 27 ರಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಖಲೆಯ1008 ಯಜ್ಞಕರ್ತರು ಭಾಗವಹಿಸಿದ್ದರು.