ಒಂದು ಲೋಟ ಕಬ್ಬಿನ ಹಾಲಲ್ಲಿ ಎಷ್ಟು ಶಕ್ತಿ ಇದೆ ಅಂತ ಗೊತ್ತಾ? ಆರೋಗ್ಯದ ಅರಸ, ಕಬ್ಬಿನ ರಸ

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ದಾಹ ಅಧಿಕವಾಗುತ್ತದೆ. ಬಿಸಿಲಲ್ಲಿ ಸ್ವಲ್ಪ ಸಮಯ ಹೋದರೆ ಸಾಕು ಕೋಲ್ಡ್ ಜ್ಯೂಸ್ ಕುಡಿಯುವ, ಐಸ್ ಕ್ರೀಮ್ ತಿನ್ನುವ ಬಯಕೆಯಾಗುತ್ತುದೆ. ಆದ್ರೆ ಆರೋಗ್ಯಕರ, ನೈಸರ್ಗಿಕವಾದ ಕಬ್ಬಿನ ಹಾಲು ಹೀರಿದರೆ ದೊರೆಯುವ ಪೌಷ್ಠಿಕಾಂಶಗಳ ಪಟ್ಟಿ ನೋಡಿದ್ರೆ ನೀವು ಯಾವತ್ತೂ ದೇಹಕ್ಕೆ ಹಾನಿ ಉಂಟು ಮಾಡುವ ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್ ಗಳತ್ತ ಕಣ್ಣೆತ್ತಿಯೂ ನೋಡದೇ ತಣ್ಣಗೇ ಶುಗರ್ ಕೇನ್ ಜ್ಯೂಸ್ ಕಡೆನೇ ವಾಲ್ತೀರಾ ಅದಂತೂ ಸತ್ಯ. ಹಾಗಾದ್ರೆ ಇದ್ರಲ್ಲಿರೋ ಔಷಧೀಯ ಗುಣಗಳನ್ನು ತಿಳ್ಕೊಳ್ಬೇಕಲ್ವಾ?

  • ಶೇಕಡಾ 15 ನೈಸರ್ಗಿಕ ಸಕ್ಕರೆ ಅಂಶವಿರುವ ಕಬ್ಬಿನ ಹಾಲು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಅತ್ಯುತ್ತಮ ಪಾನೀಯ.
  • ಅನೇಕರಿಗೆ ಮೂತ್ರಪಿಂಡದ ಸೋಂಕು ಹಾಗೂ ಮೂತ್ರ ಪಿಂಡದಲ್ಲಿ ಉಂಟಾಗುವ ಕಲ್ಲಿಗೆ ಕೂಡಾ ಕಬ್ಬಿನ ರಸ ದಿವ್ಯೌಷಧ
  •  

  • ತೂಕ ಕಡಿಮೆ ಆಗಬೇಕು ಅಂತ ನೀವು ಒದ್ದಾಡ್ತಾ ಇದ್ರೆ ಇದನ್ನ ಸೇವಿಸಲು ಮರೀಬೇಡಿ. ಇದರಲ್ಲಿರುವ ಅಧಿಕ ಪ್ರಮಾಣದ ನ್ಯಾಚುರಲ್‌ ಶುಗರ್‌ ಕ್ಯಾಲೊರಿ ಬರ್ನ್‌ ಮಾಡುತ್ತದೆ.
  • ಒಣ ಕೆಮ್ಮಿದ್ದರೆ ದಿನಕ್ಕೆ 2 ಬಾರಿ ಕಬ್ಬಿನ ರಸ ಸೇವಿಸಿ.
  • ಬಾಣಂತಿಯರ ಹಾಲು ಹೆಚ್ಚಲು ಇದು ಸಹಕಾರಿ.
  • ಇದನ್ನು ಚೆನ್ನಾಗಿ ಕುದಿಸಿ ನಿಯಮಿತವಾಗಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
  • ಕಬ್ಬಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ಮಲೇರಿಯಾದಲ್ಲಿ ಬರುವ ವಾಂತಿ ಕಡಿಮೆಯಾಗುತ್ತದೆ.
  • ಕಬ್ಬಿನ ರಸವನ್ನು ವಿನೆಗರ್‌ ಜೊತೆ ಬೆರೆಸಿ ದೇಹದ ಚರ್ಮಕ್ಕೆ ಹಚ್ಚಿದರೆ ಟೈಫಾಯ್ಡ್‌ ಜ್ವರದಿಂದ ದೇಹದಲ್ಲಾಗುವ ಕೆಂಪು ಕಲೆಗಳು ಮತ್ತು ನೋವನ್ನು ನಿವಾರಣ ಮಾಡಬಹುದಾಗಿದೆ.
  • ಒಂದು ಲೋಟ ಕಬ್ಬಿನ ರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ಊಟದ ಮುಂಚೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
  • ಸಿಹಿಯಾದ ಕಬ್ಬಿನ ರಸ ದೇಹಕ್ಕೆ ಶಕ್ತಿ ತುಂಬುವುದಲ್ಲದೇ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಸವಿಯಾಗಿದೆ. ಇದರಲ್ಲಿರುವ ಅಮಿನೊ ಆ್ಯಸಿಡ್ಸ್‌ ಒತ್ತಡ ಉಂಟು ಮಾಡುವ ಹಾರ್ಮೋನ್‌ಗಳ ಮಟ್ಟವನ್ನು ಬ್ಯಾಲೆನ್ಸ್‌ ಮಾಡುತ್ತದೆ. ಇದರಿಂದ ಚೆನ್ನಾಗಿ ನಿದ್ದೆ ಬಂದು ಒತ್ತಡ ಕಡಿಮೆಯಾಗುವುದಲ್ಲದೇ ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೂ ಇದೆ ರಾಮಬಾಣ.