ಸಿಎ ಅಂತಿಮ ಪರೀಕ್ಷೆ: ಪೈ ನಾಯಕ್ ಎಂಡ್ ಅಸೋಸಿಯೇಟ್ ನ ವಿದ್ಯಾರ್ಥಿನಿಯರು ತೇರ್ಗಡೆ

ಉಡುಪಿ: ಉಡುಪಿಯ ಪೈ ನಾಯಕ್ ಎಂಡ್ ಅಸೋಸಿಯೇಟ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ವಿದ್ಯಾಶ್ರೀ ಮಯ್ಯ ಹಾಗೂ ಈಶ ಪೈ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾಶ್ರೀ ಉಪ್ಪುಂದ ನಿವಾಸಿ ವನಿತಾ ಮಯ್ಯ ಮತ್ತು ಗಣೇಶ್ ಮಯ್ಯ ಇವರ ಪುತ್ರಿ. ಈಶ ಪೈ ಅಂಬಲಪಾಡಿ ನಿವಾಸಿ ರೂಪಶ್ರೀ ಪೈ ಮತ್ತು ಬಿಪಿ ಯೋಗೇಶ್ ಪೈ ಪುತ್ರಿ.