ಉಡುಪಿ: ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಸಂಘದ ಮಹಾಸಭೆಯು ದಿನಾಂಕ: 1-5-2022 ರವಿವಾರ, ಪೂರ್ವಾಹ್ನ 10:00ಕ್ಕೆ ಸರಿಯಾಗಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಪಿ.ಬಿ ವಾಸುದೇವ ರಾವ್ ಇವರ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ ಎಂ. ಕೆ ಮೋಹನ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನಪಾರ್ವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ದಶಮಾನೋತ್ಸವ “ಸಂಭ್ರಮ” ಆಮಂತ್ರಣ
ಸಭಾಂಗಣ: ದಿನಾಂಕ: 1-5-2022 ನೇ ರವಿವಾರ ಪೂರ್ವಾಹ್ನ 11.30 “ಸಂಭ್ರಮ”ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ
ಉದ್ಘಾಟಕರು: ಶ್ರೀ ಪಿ. ಬಿ. ವಾಸುದೇವ ರಾವ್ ಗೌರವಾಧ್ಯಕ್ಷರು, ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಪಡುಬಿದ್ರಿ
12:30 ರಿಂದ ಭೋಜನ ವಿರಾಮ
ದಿನಾಂಕ: 1-5-2022 ನೇ ರವಿವಾರ ಸಾಯಂಕಾಲ 4:30 ಸಂಘದ ದಶಮಾನೋತ್ಸವದ ಸವಿನೆನಪಿನ ಅಂಗವಾಗಿ ಮತ್ತು 13ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ “ಸಂಭ್ರಮ” ಸಭಾವೇದಿಕೆಯ ಸಭಾ ಕಾರ್ಯಕ್ರಮ
ಅಧ್ಯಕ್ಷತೆ : ಶ್ರೀ ಎಂ. ಕೆ ಮೋಹನ್ ರಾವ್, ಅಧ್ಯಕ್ಷರು ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಪಡುಬಿದ್ರಿ
ಮುಖ್ಯ ಅತಿಥಿ : ಶ್ರೀ ಎಂ ದೇವಾನಂದ ಭಟ್ ಬೆಳುವಾಯಿ, ಅಧ್ಯಕ್ಷರು ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ.), ಮಂಗಳೂರು
ಗೌರವ ಉಪಸ್ಥಿತಿ : ನಮ್ಮ ಸಮಾಜದ ಎಲ್ಲಾ ಸಂಘಗಳ ಅಧ್ಯಕ್ಷರು
ಸಾಧಕರಿಗೆ ಸನ್ಮಾನ :
ಗೌರವಿಸಲ್ಪಡುವವರು : ಶ್ರೀ ಐ. ಲಕ್ಷ್ಮೀಕಾಂತ್ ರಾವ್. ಇನ್ನಾ (ಕೃಷಿಕರು/ ಗುತ್ತಿಗೆದಾರರು) ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ. ಶ್ರೀಮತಿ ಶರಾವತಿ ಯು.ಆರ್, ಎಲ್ಲೂರು (ನಿವೃತ್ತ ಶಿಕ್ಷಕಿ) ಸಮಾಜ ಸೇವೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ. ಕೃಷಿಯಲ್ಲಿ ಜಿಲ್ಲಾಮಟ್ಟದ ಸಾಧನಾಶೀಲ ಪ್ರಶಸ್ತಿ ಪುರಸ್ಕೃತ ಶ್ರೀ ವೈ. ಕುಮಾರಸ್ವಾಮಿ, ಪಡುಬಿದ್ರಿ. ಹಿರಿಯ ನಾಗರಿಕರ ವಿಭಾಗದ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವ ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ಪ್ರಕಟನೆ ತಿಳಿಸಿದೆ.