‘ರೇಷನ್ ಕಾರ್ಡ್ ತಿದ್ದುಪಡಿ’ ಆರಂಭ

ಬೆಂಗಳೂರು : ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು, ಇಂದಿನಿಂದ ಪಡಿತರ ಚೀಟಿ ತಿದ್ದುಪಡಿ ಪೋರ್ಟಲ್ ಆರಂಭಿಸಿದೆ.ನೀವು ಆನ್‌ಲೈನ್‌ನಲ್ಲಿ ಪಡಿತರ ಮಾರ್ಪಡಿಸಲು ಬಯಸಿದ್ರೆ, ನೀವು ಗ್ರಾಮ ಪಂಚಾಯಿತಿ ಕಚೇರಿ ಅಥವಾ ಬಯೋ-ಫೋಟೋ ಕೇಂದ್ರಕ್ಕೆ ಭೇಟಿ ನೀಡಬಹುದು. ಅದ್ರಂತೆ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಏನಾದ್ರು ದೋಷಗಳಿದ್ರೆ, ತಿದ್ದುಪಡಿ ಮಾಡಬಹುದು.

ಆನ್‌ಲೈನ್‌ನಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳು ಇಂತಿವೆ.!

* ಹೆಸರು ಬದಲಾವಣೆಯ ಮಾಡುವಂತಿದ್ರೆ, ಅದರ ಅಫಿಡವಿಟ್

* ಎರಡೂ ಹೆಸರುಗಳನ್ನ ಉಲ್ಲೇಖಿಸುವ ನ್ಯಾಯಾಲಯದ ಆದೇಶ

* ವಿಳಾಸ ಪುರಾವೆ, ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್

ಆನ್ಲೈನ್‍ನಲ್ಲೇ ತಿದ್ದುಪಡೆ ಮಾಡಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ನೀಡಿ