ಬೆಂಗಳೂರು: ರಾಜ್ಯದ ಈ ಸಾಲಿನ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮರು ಮೌಲ್ಯ ಮಾಪನ ಮಾಡಲು ಮೇ.15 ರಿಂದ ಮೇ.21 ರವರೆಗೆ ಅವಕಾಶವಿದೆ. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ.
ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಫೋಟೋಕಾಪಿ ಪಡೆಯಲು ಮೇ. 08 ರಿಂದ ಮೇ.14ರವರೆಗೆ ಅವಕಾಶವಿದೆ.. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ
ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯು (ಶೇ.96.8) ಎಸ್‌ಎಸ್‌ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ.ಮಂಡ್ಯ ಜಿಲ್ಲೆ ಎರಡನೇ ಸ್ಥಾನ (96.74) ಪಡೆದು ಕೊಂಡಿದ್ದು, ಮೂರನೇ ಸ್ಥಾನ ಹಾಸನ ಜಿಲ್ಲೆ (96.68) ಪಡೆದಿದೆ.ಈ ಬಾರಿ 8,35,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 59,246 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ ಪಡೆದು ಉತ್ತೀರ್ಣರಾಗಿದ್ದಾರೆ.