ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ ಆಚಾರ್ಯ ಅವರಿಂದ ಬಿರುಸಿನ ಮತಪ್ರಚಾರ

ಉಡುಪಿ: ಸಮಾಜ ಸೇವಕ, ಉಡುಪಿಯ ಮುಂಚೂಣಿ ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ ಆಚಾರ್ಯ ಅಂಬಾಗಿಲು ಪರಿಸರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಪ್ರಸಾದ್ ರಾಜ್ ಕಾಂಚನ್ ಪರವಾಗಿ ಮತದಾರರ ಒಲವಿದೆ. ನಮ್ಮ ಗೆಲುವು ಗ್ಯಾರಂಟಿ. ಬಡವರ ಪರವಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಈ ಬಾರಿ ರಾಜ್ಯದಲ್ಲಿ ನಮ್ಮ ಪಕ್ಷ ಸರಕಾರ ರಚಿಸುವುದು ಖಚಿತ’ ಎಂದರು. ಚರಣರಾಜ್ ಬಂಗೇರ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಂದ ನಗರದ ಬಸ್ ನಿಲ್ದಾಣದಲ್ಲಿ ಮತಯಾಚನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಸಿಟಿ, ಸರ್ವಿಸ್ ಬಸ್ ನಿಲ್ದಾಣ, ಅಂಗಡಿ-ಮುಂಗಟ್ಟು, ಆಟೋ ನಿಲ್ದಾಣ ಸೇರಿದಂತೆ ಉಡುಪಿ ನಗರ ಭಾಗದಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕರಾದ ಸುರೇಶ್ ಶೆಟ್ಟಿ ಬನ್ನಂಜೆ, ಕುಶಲ್ ಶೆಟ್ಟಿ, ಸುಕೇಶ್, ಮಹಾಬಲ ಕುಂದರ್, ಕಾರ್ಯಕರ್ತರಾದ ಸುದರ್ಶನ್ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳ ಪೇಟೆಯಲ್ಲಿ ಮುನಿಯಾಲು ಉದಯ್ ಶೆಟ್ಟಿ ಅವರಿಂದ ಮತಯಾಚನೆ

ಕಾರ್ಕಳ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಶೆಟ್ಟಿ ಅವರು ಪುರಸಭೆ ವ್ಯಾಪ್ತಿಯಿಂದ ಅನಂತಶಯನದಿಂದ ಜೋಡುರಸ್ತೆವರೆಗೆ ಪ್ರತೀ ಮಳಿಗೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪಲಿಮಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ದೈವಸ್ಥಾನಗಳಿಗೆ ಭೇಟಿ

ಹಿರಿಯಡಕ: ಕಾಪು ವಿಧಾನಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಪಲಿಮಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ದೈವಸ್ಥಾನಗಳಿಗೆ ಭೇಟಿ ನೀಡಿದರು. ಪಲಿಮಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ 183 ಬೂತಿನ ನಂದಿಕೂರು, ಪ್ರದೇಶದ, ಪಡುಕೆರೆ ನಂದಿಕೂರು ಕೊರ್ದಬ್ಬು ದೈವಸ್ಥಾನ ಹಾಗೂ ಅಡ್ವೆ ಅರಂತಡೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಮತಯಾಚಿಸಲಾಯಿತು.

ಕೃಷ್ಣ ಮಠಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ

ಉಡುಪಿ: ಮಹಾರಾಷ್ಟ್ರಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ಬಿ.ಜೆ.ಪಿ.ಯ ಉದಯಕುಮಾರ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ವಾಸುದೇವ ಪೆರಂಪಳ್ಳಿ, ಮೊದಲಾದವರು ಉಪಸ್ಥಿತರಿದ್ದರು.