ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ: ಹೂಡೆ ಸಾಲಿಹಾತ್ ಶಾಲೆಗೆ ಶೇ.100 ಫಲಿತಾಂಶ

ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧಿಸಿದೆ.ಪರೀಕ್ಷೆಗೆ ಹಾಜರಾದ ಒಟ್ಟು 59 ವಿದ್ಯಾರ್ಥಿಗಳಲ್ಲಿ ಎಲ್ಲಾ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇವರಲ್ಲಿ 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಯಿಶಾ ಸಿಮಾನ್ 605 (ಶೇ.96.08), ಟಿ.ಎಚ್. ಮುಸ್ಕಾನ್ ಬಾನು 604 (ಶೇ.96.64) ಹಾಗೂ ಫರಿಹಾ ಶಫಿ ನಾಕ್ವಿ 603 (ಶೇ.96.48), ಶದಾ ಟಿ.ಕೆ. 586 (93.76), ಅಯಿಶಾ ಸಫಿಯಾ 572 (ಶೇ.91.52), ಶಿಫಾ ಶಿರಿನ್ 571(ಶೇ.91.36), ಫಾತಿಮಾ ಝುಹಾ ಅಫ್ಜಲ್ 563(ಶೇ.90.08) ಅಂಕಗಳನ್ನು ಪಡೆದಿದ್ದಾರೆ.