ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ: ಹೂಡೆ ಸಾಲಿಹಾತ್ ಶಾಲೆಗೆ ಶೇ.100 ಫಲಿತಾಂಶ

ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧಿಸಿದೆ.ಪರೀಕ್ಷೆಗೆ ಹಾಜರಾದ ಒಟ್ಟು 59 ವಿದ್ಯಾರ್ಥಿಗಳಲ್ಲಿ ಎಲ್ಲಾ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಯಿಶಾ ಸಿಮಾನ್ 605 (ಶೇ.96.08), ಟಿ.ಎಚ್. ಮುಸ್ಕಾನ್ ಬಾನು 604 (ಶೇ.96.64) ಹಾಗೂ ಫರಿಹಾ ಶಫಿ ನಾಕ್ವಿ 603 (ಶೇ.96.48), ಶದಾ […]
ಕೆಡಿಪಿ ಸಭೆ ಮುಂದೂಡಿಕೆ

ಉಡುಪಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎಪ್ರಿಲ್ 28 ರಂದು ನಡೆಯಲಿದ್ದ ಕೆಡಿಪಿ ಸಭೆಯನ್ನು ಮುಂದೂಡಲಾಗಿದ್ದು ಸದರಿ ಸಭೆಯು ಮೇ 12 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗ್ರಾ.ಪಂ ಚುನಾಯಿತ ಸದಸ್ಯರ ಸ್ಥಾನ: ಆಕ್ಷೇಪಣೆಗೆ ಅವಧಿ ವಿಸ್ತರಣೆ

ಉಡುಪಿ: ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್‌ಗಳ ಚುನಾಯಿತ ಸದಸ್ಯ ಸ್ಥಾನಗಳನ್ನು ಪ್ರಕರಣ 5(1) ರಂತೆ ನಿಗದಿಪಡಿಸಿದ ಕರಡು ಪ್ರಕಟಣೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2 ರ ಸಂಜೆ 5.30ರವರೆಗೆ ವಿಸ್ತರಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ ಸ್ವೀಕರಿಸಿದ ಆಕ್ಷೇಪಣೆ/ಅಹವಾಲುಗಳ ಬಗ್ಗೆ ಎಪ್ರಿಲ್ 27 ರಂದು ನಿಗದಿಪಡಿಸಿದ್ದ ಪರಿಶೀಲನಾ ಅದಾಲತ್‌ನ ದಿನಾಂಕವನ್ನು ಮುಂದೂಡಿದ್ದು ಹೊಸ ವೇಳಾಪಟ್ಟಿಯಂತೆ ಮೇ 5 ರಂದು ಮಂಗಳವಾರ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ […]
ತಿರಸ್ಕೃತ ಬೆಳೆ ವಿಮೆ: ಆಕ್ಷೇಪಣೆ ಆಹ್ವಾನ

ಉಡುಪಿ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2024-25 ಮುಂಗಾರು ಹಂಗಾಮಿನ ಬೆಳೆ ವಿಮೆಯಡಿ ನೋಂದಣಿಯಾದ ಪ್ರಸ್ತಾವನೆಗಳು ವಿಮಾ ಸಂಸ್ಥೆಯವರು ನೋಂದಾಯಿಸಿದ ಬೆಳೆಗೂ ಹಾಗೂ ಬೆಳೆ ಸಮೀಕ್ಷೆ ವರದಿಗೂ ತಾಳೆಯಾಗದ ಕಾರಣ ತಿರಸ್ಕೃತವಾಗಿದ್ದು ಸದರಿ ಪಟ್ಟಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಉಡುಪಿ, ರೈತ ಸಂಪರ್ಕ ಕೇಂದ್ರ, ಬ್ರಹ್ಮಾವರ ಹಾಗೂ ಸಂಬoಧಪಟ್ಟ ಗ್ರಾಮ ಪಂಚಾಯತ್‌ನ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದ್ದು ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಕಾಪು/ಬ್ರಹ್ಮಾವರ/ಸಹಾಯಕ ಕೃಷಿ […]
ಕಸ್ತೂರ್ಬಾ ಆಸ್ಪತ್ರೆಯು ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ ಆಚರಣೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಏಪ್ರಿಲ್ 25 ರಂದು ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ 2026 ಅನ್ನು ಆಚರಿಸಿತು, ಇದು ಪ್ರಯೋಗಾಲಯ ವೃತ್ತಿಪರರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಏಪ್ರಿಲ್ 19 ರಿಂದ ಏಪ್ರಿಲ್ 25 ರವರೆಗೆ ಆಚರಿಸಲಾಗುವ ವಿಶೇಷ ವಾರದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ನಿಖರವಾದ ರೋಗನಿರ್ಣಯ ಮತ್ತು ಗುಣಮಟ್ಟದ ರೋಗಿಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ತೆರೆಮರೆಯಲ್ಲಿ ಕೆಲಸ ಮಾಡುವ ಪ್ರಯೋಗಾಲಯ ಸಿಬ್ಬಂದಿಯ ಅವಿಶ್ರಾಂತ ಪ್ರಯತ್ನಗಳನ್ನು ಈ ಸಮರ್ಪಿತ ವಾರವು ಗೌರವಿಸುತ್ತದೆ. ಈ ವರ್ಷದ ಧ್ಯೇಯವಾಕ್ಯ “ಪ್ರಯೋಗಾಲಯ ಕಥೆ: ನಮ್ಮ […]