ಮಂಗಳೂರು: ನಗರದ ಖ್ಯಾತ ಹೋಟೆಲ್ ಉದ್ಯಮಿ, ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಹಾಗೂ ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರ ಪತ್ನಿ ಮೈನಾ ಎಸ್ ಶೆಟ್ಟಿ ಅವರು ಬುಧವಾರ ರಾತ್ರಿ 8 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಾವಧಿಯ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತಿ, ಇಬ್ಬರು ಪುತ್ರರು ಮತ್ತು ಹಲವಾರು ಬಂಧುಗಳನ್ನು ಅಗಲಿದ್ದಾರೆ.