ಎಲ್ಲಾ ಜಾತಿ, ವರ್ಗದ ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿದ ನಾಯಕ ಹರೀಶ್‌ ಪೂಂಜ: ಕೋಟ

ಬೆಳ್ತಂಗಡಿ: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಪ್ರಮುಖ ಯೋಜನೆಗಳನ್ನು ಹರೀಶ್‌ ಪೂಂಜ ತಾಲೂಕಿನ ಅರ್ಹ ಫಲಾನುಭವಿಗಳಿಗೆ ತಲುಪಿಸಿ ಬೆಳ್ತಂಗಡಿ ಕ್ಷೇತ್ರದ ಪ್ರಗತಿಗೆ ಭಗೀರಥ ಪ್ರಯತ್ನ ಮಾಡಿದ್ದಾರೆ, ಎಲ್ಲಾ ವರ್ಗ, ಎಲ್ಲಾ ಜಾತಿಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸಿದವರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪಡಂಗಡಿ, ವೇಣೂರು, ನಾರಾವಿಯಲ್ಲಿ ನಡೆದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಪರ ಬಿಜೆಪಿಯ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಭಿವೃದ್ಧಿಯ ವಿಚಾರದಲ್ಲಿ ಈ ರಾಜ್ಯ ಕಂಡ […]

ಪೆರ್ಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತ ಯಾಚನೆ

ಕಾಪು: ಬಿಜೆಪಿ ರಾಷ್ಟ್ರ ಧರ್ಮದ ಚಿಂತನೆ ಅನುಸರಿಸಿಕೊಂಡು ಬರುತ್ತಿರುವ ಪಕ್ಷವಾಗಿದೆ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಚಿಂತನೆಯನ್ನು ಅನುಸರಿಸಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವಿಗಿಂತಲೂ ಧರ್ಮ ಗೆಲ್ಲಬೇಕು. ನಾಡಿನ ಪರಂಪರೆ ಗೆಲ್ಲಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಗೆಲ್ಲಬೇಕು. ಅದಕ್ಕಾಗಿ ನಾವೆಲ್ಲರೂ ಕಟಿ ಬದ್ಧರಾಗಿ, ಕೆಲಸ ನಿರ್ವಹಿಸೋಣ ಎಂದು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಮಂಗಳವಾರ ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ […]

ಕಾಂಗ್ರೆಸ್ ನಾಯಕ ಡಿಕೆಶಿ ಹೆಲಿಕಾಪ್ಟರ್ ಭೂಸ್ಪರ್ಶ ಸಂದರ್ಭ ಹೆಲಿಪ್ಯಾಡ್ ನಲ್ಲಿ ಆಕಸ್ಮಿಕ ಬೆಂಕಿ

ಕಾರವಾರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್‌ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್‌ಗೆ ಸಿಗ್ನಲ್ ನೀಡುವ ಸ್ಮೋಕ್ ಕ್ಯಾಂಡಲ್‌ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಗುರುವಾರ ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿದ್ದು ಈ ಸಭೆಗೆ ಡಿಕೆಶಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ಸಂದರ್ಭ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ […]

ಪಿಯುಸಿ ನಂತರ ಉದ್ಯೋಗಾಧಾರಿತ ವೃತ್ತಿಪರ ಪದವಿ ಕೋರ್ಸ್‌ಗಳಿಗಾಗಿ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ನೋಂದಾಯಿಸಿ

ನಿಮ್ಮ ಸ್ನಾತಕೋತ್ತರ ಪದವಿಯನ್ನು ಪಡೆಯಲು ಬಯಸುವಿರಾ? ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸದ ನಂತರ ಉದ್ಯೋಗಾಧಾರಿತ ವೃತ್ತಿಪರ ಪದವಿ ಕೋರ್ಸ್‌ಗಳಿಗಾಗಿ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ನೋಂದಾಯಿಸಿಕೊಳ್ಳಿ. ಲಭ್ಯವಿರುವ ವೃತ್ತಿಪರ ಕೋರ್ಸ್ ಗಳು ಹೋಟೆಲ್ ಮ್ಯಾನೇಜ್ಮೆಂಟ್ ಫ್ಯಾಶನ್ ಡಿಸೈನಿಂಗ್ ಇಂಟೀರಿಯರ್ ಡಿಸೈನ್ ಎಂಡ್ ಡೆಕೋರ್ ಫುಡ್ ಟೆಕ್ನಾಲಜಿ ಕಂಪ್ಯೂಟರ್ ಅಪ್ಲಿಕೇಶನ್‌ಗಳು ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್ ಕಾಮರ್ಸ್ ಏವಿಯೇಶನ್ ಎಂಡ್ ಹಾಸ್ಪಿಟಾಲಿಟಿ ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ಸ್ ಸೈಬರ್ ಸೆಕ್ಯೂರಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಿಗ್ ಡೇಟಾ ಅನಾಲಿಟಿಕ್ಸ್ ಸಿಎ […]

ಧರ್ಮಸ್ಥಳದಲ್ಲಿ 201 ಜೋಡಿ ವಧು- ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣ…!!

ಉಜಿರೆ: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ ೫೧ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು. 6.40 ರ ಗೋಧೂಳಿ […]