ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಮಣಿಪಾಲ: ಉದ್ಯೋಗ ಆಥವಾ ನೌಕರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್ ಅನ್ನು ಮಣಿಪಾಲದ, ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಲಾಗುತ್ತಿದೆ. ದಶಮಾನೋತ್ಸವ ಆಚರಿಸುತ್ತಿರುವ ಈ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದಲೂ ತರಬೇತಿ ನೀಡುತ್ತಿದ್ದು, 500ಕ್ಕೂ ಮಿಕ್ಕಿ ಯುವತಿಯರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಯಶ್ವಸಿಯಾಗಿದೆ.

ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಹಲವು ಪ್ರತಿಷ್ಠಿತ ಹಾಗೂ ಹೆಸರುವಾಸಿ ಶಿಕ್ಷಣ (CBSE/ICSE/STATE) ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಮೂಲಕ ಭವಿಷ್ಯ ರೂಪಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯಿರುವ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿರುವ ಮಹಿಳೆಯರು/ಗೃಹಿಣಿಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ನರ್ಸರಿ ಶಿಕ್ಷಣವು “ನಲಿ ಕಲಿ” ರೂಪುರೇಷೆಯೊಂದಿಗೆ ಮಕ್ಕಳ ಮಾನಸಿಕ ಭೌದ್ಧಿಕ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು ಶಿಕ್ಷಕಿಯರಿಗೆ ಭೋದನೆಯು ಮಗುವಿನ ಎಲ್ಲಾ ಅಂಶಗಳನ್ನು ಬೆಳೆಸುವ ಕಡೆಗೆ ವ್ಯವಹರಿಸುತ್ತದೆ. ಶಿಕ್ಷಕಿಯರಿಗೆ ಪ್ರಾಸ ಬದ್ಧವಾಗಿ ಕಥೆ, ಪದ್ಯ, ಆಟಗಳ ಮೂಲಕ, ಮಗುವು ಸುಲಭವಾಗಿ ಕಲಿಯಲು ಒಳ್ಳೆಯ ತರಬೇತಿ ನೀಡುತ್ತಿದೆ. ಅಲ್ಲದೇ ಪಠ್ಯಕ್ರಮದ ಯೋಜನೆ, ಚಿತ್ರಕಲೆ, ರೈಮ್ಸ್, ಧ್ವನಿಶಾಸ್ತ್ರ (Phonetics), ಯೋಗ, ಪಪ್ಪೆಟ್(puppets) ಮುಂತಾದ ವಿವಿಧ ವಿಶೇಷ ಕಾರ್ಯಗಾರಗಳು ಮತ್ತು ವಿಚಾರ ಗೋಷ್ಠಿಗಳು ಉತ್ತಮ ಭೋದನಾ ವಿಧಾನಗಳನ್ನು ತಿಳಿಸಿ ಕೊಡಲಾಗುತ್ತದೆ.

ಮಾಂಟೆಸ್ಸರಿ ವಿಧಾನದ ಸಲಕರಣೆಗಳನ್ನು ಹೇಗೆ ಉಪಯೋಗಿಸುವುದು ಮತ್ತು ಮಗುವಿನ ದೈಹಿಕ, ಭಾವಾನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆ ಅನುಕೂಲವಾಗುವ ಭೋದನಾ ವಿಧಾನಗಳನ್ನು ಮಾಡಲಾಗುತ್ತದೆ. ಮಾಂಟೆಸ್ಸರಿ ವಿಧಾನದ ತರಬೇತಿಯು ಎಳೆಯ ಮಕ್ಕಳ ಶಿಕ್ಷಕ ವೃತ್ತಿಯಲ್ಲಿ ಒಂದು ಆಕರ್ಷಕ, ಮನಶಾಸ್ತ್ರೀಯ ಆಧಾರದ ತರಬೇತಿಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹಳ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇಲ್ಲಿ ನಿರುದ್ಯೋಗಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ತರಬೇತಿ ಪಡೆಯದ ಶಿಕ್ಷಕಿಯರಿಗೂ ಅವಕಾಶವಿದೆ. ತರಬೇತಿ ಬಳಿಕ ಆನೇಕ ಶಾಲೆಗಳಲ್ಲಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಲ್ಲದೇ ತಮ್ಮದೇ ಆದ ನರ್ಸರಿ ಸ್ಕೂಲ್‌ನ್ನು ನಡೆಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಈ ಸಂಸ್ಥೆಯು 2021-22 ರ ಸಾಲಿನಲ್ಲಿ 100%ರಷ್ಟು ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

2021-23ರ ಸಾಲಿನ ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಸಂಯೋಜಕಿ ಸುನೀತಾ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901722527 ದೂರವಾಣಿಯನ್ನು ಸಂಪರ್ಕಿಸಿ.