ಪಡುಬಿದ್ರಿ: ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಎಲ್ಲೂರು ಇದರ ಜಾತ್ರಾ ಮಹೋತ್ಸವವು ಎಪ್ರಿಲ್ 21 ರ ವರೆಗೆ ಜರಗಲಿದೆ.
ಶ್ರೀ ಮನ್ಮಹಾರಥೋತ್ಸವ:
ತಾ.19 ರಂದು ಮಂಗಳವಾರ ಮಧ್ಯಾಹ್ನ 11.00ಕ್ಕೆ ರಥಾರೋಹಣ, ಶ್ರೀ ಮನ್ಮಹಾರಥೋತ್ಸವ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಚೇರಿ, ರಾತ್ರಿ 8:30ಕ್ಕೆ ರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತಬಲಿ, ಶಯನೋತ್ಸವ.
ತಾ.20 ರಂದು ಬುಧವಾರ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ 6:30ಕ್ಕೆ ಅವಭೃತ ಹೊರಡುವುದು, ಅವಭೃತ, ಗಂಧ ಪೂಜೆ, ಧ್ವಜಾವರೋಹಣ, ಮಹಾಮಂತ್ರಾಕ್ಷತೆ.
ತಾ.14 ರಿಂದ 20 ರ ವರೆಗೆ ಪ್ರತೀ ದಿನ ಪ್ರಧಾನ ಹೋಮ, ನವಕ, ಶತರುದ್ರಾಭಿಷೇಕ, ಉತ್ಸವ ಬಲಿ, ಕಟ್ಟೆ ಪೂಜೆಗಳು ನಡೆಯಲಿರುವುದು.
ಭಕ್ತಾದಿಗಳು ಈ ಪರ್ವ ಕಾಲದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿ, ಶ್ರೀ ವಿಶ್ವೇಶ್ವರ ದೇವರ ಪ್ರಸಾದ ಸ್ವೀಕರಿಸಿ, ಭಗವದನುಗ್ರಹಕ್ಕೆ ಪಾತ್ರರಾಗಬೇಕಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸರ್ವ ಸದಸ್ಯರು ಪ್ರಕಟಣೆ ತಿಳಿಸಿದ್ದಾರೆ.