ಎ.19 ರಿಂದ ಮೇ.7ರ ವರೆಗೆ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏ.19 ರಿಂದ ಮೇ 7 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ವೇಳಾಪಟ್ಟಿ ಹೀಗಿದೆ: ಏಪ್ರಿಲ್ 19 ರಂದು ಕುಕ್ಕುಂದೂರು ಅಂಬೇಡ್ಕರ್ ಸಭಾಭವನ ಹಾಗೂ ಹಿರ್ಗಾನ […]

ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನಾಳೆ ಶ್ರೀ ಮನ್ಮಹಾರಥೋತ್ಸವ

ಪಡುಬಿದ್ರಿ: ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಎಲ್ಲೂರು ಇದರ ಜಾತ್ರಾ ಮಹೋತ್ಸವವು ಎಪ್ರಿಲ್ 21 ರ ವರೆಗೆ ಜರಗಲಿದೆ. ಶ್ರೀ ಮನ್ಮಹಾರಥೋತ್ಸವ: ತಾ.19 ರಂದು ಮಂಗಳವಾರ ಮಧ್ಯಾಹ್ನ 11.00ಕ್ಕೆ ರಥಾರೋಹಣ, ಶ್ರೀ ಮನ್ಮಹಾರಥೋತ್ಸವ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಚೇರಿ, ರಾತ್ರಿ 8:30ಕ್ಕೆ ರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತಬಲಿ, ಶಯನೋತ್ಸವ. ತಾ.20‌ ರಂದು ಬುಧವಾರ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ 6:30ಕ್ಕೆ ಅವಭೃತ ಹೊರಡುವುದು, ಅವಭೃತ, […]

ಆಚಾರ್ಯಾಸ್ ಏಸ್: ಪಿಯು ವಕೇಷನ ಬ್ಯಾಚ್ ವಿದ್ಯಾರ್ಥಿಗಳಿಗೆ ಫಾರ್ಮುಲಾ ಕೃತಿ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿ ಆಚಾರ್ಯಾಸ್ ಏಸ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಜಾದಿನದ ಶೈಕ್ಷಣಿಕ ತರಬೇತಿಯ ಶುಭಾರಂಭದ ಸಂದರ್ಭದಲ್ಲಿ ವಿನೂತನ ಫಾರ್ಮುಲಾ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು. ಆಚಾರ್ಯಾಸ್ ಏಸನ ಪ್ರಧಾನ ಕಚೇರಿಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಶ್ರೀ ಜಯರಾಮ ರಾವ್ ಫಾರ್ಮುಲಾ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿ ಶುಭ ಹಾರೈಸಿ ಶೈಕ್ಷಣಿಕ ಅವಧಿ ಪೂರೈಸುವ ತನಕ ವಿದ್ಯಾರ್ಥಿಗಳ ಗುರಿ […]

ರೆಡ್‌ಕ್ರಾಸ್ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಕೋವಿಡ್ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ನಡೆಸಿದಂತಹ ಪ್ರತಿಯೊಂದು ಕಾರ್ಯ ಶ್ಲಾಘನೀಯವಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿಯೂ ಕೂಡ ಶ್ರಮ ವಹಿಸಿ, ಸಾಮಾಜಿಕ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ರೆಡ್‌ಕ್ರಾಸ್ ಸಂಸ್ಥೆಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ತಿಳಿಸಿದರು. ಅವರು ಇಂದು ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಶಾಖೆ ಇವರ ಆಶ್ರಯದಲ್ಲಿ ನಡೆದ ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ಎರಡು ದಿನದ ತರಬೇತಿ ಕಾರ್ಯಾಗಾರವನ್ನು […]

ಉಡುಪಿ: ಮಗುವಿನೊಂದಿಗೆ ತಾಯಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಬಳಿ ಇರುವ ಡಿ.ಸಿ.ಎಂ ಕಾಲೋನಿ ನಿವಾಸಿ ಪದ್ಮ (22) ಎಂಬ ಮಹಿಳೆಯು ತನ್ನ 2 ವರ್ಷದ ಮಗಳಾದ ಪ್ರಣತಿಯೊಂದಿಗೆ ಬಟ್ಟೆ ಖರೀದಿಗೆಂದು ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ […]