ಕಳೆದುಹೋದ ಚಿನ್ನದ ಸರ ಮರಳಿಸಿದ ಶ್ರೀ ಮಂದಾರ್ತಿ ದೇವಸ್ಥಾನದ ಸಿಬ್ಬಂದಿ, ಪ್ರಾಮಾಣಿಕತೆಗೆ ಜನರಿಂದ ಭಾರೀ ಮೆಚ್ಚುಗೆ

ಕುಂದಾಪುರ: ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಾದ ರಾಜು ಕುಲಾಲ್ ಹೈಕಾಡಿ ಅವರು ಕಳೆದುಕೊಂಡಿದ್ದ ಚಿನ್ನದ ಸರವನ್ನು ಮಂದಾರ್ತಿ ದೇವಳದ ಊಟದ ಹಾಲ್‌ನ ಮೇಲ್ವಿಚಾರಕರಾದ ದಿನೇಶ್ ಕೊಠಾರಿ ಅವರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಜು ಕುಲಾಲ್ ಅವರ ಸುಮಾರು 4 ಪವನ್ ಚಿನ್ನದ ಸರ ಊಟದ ಹಾಲ್‌ನಲ್ಲಿ ಕಳೆದು ಹೋಗಿತ್ತು. ಅದನ್ನು ಜಾಗರೂಕತೆಯಿಂದ ದಿನೇಶ್ ಕೊಠಾರಿ ಅವರು ಮರಳಿಸಿದ್ದಾರೆ.

ಅವರ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಭಕ್ತರ ಮೇಲಿನ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿದ್ದು.ಸರ ಕಳೆದುಕೊಂಡಿದ್ದ ರಾಜು ಕುಲಾಲ್ ಅವರು ಮಂದಾರ್ತಿ ಅಮ್ಮನ ಸನ್ನಿಧಿಯಲ್ಲಿ,ದೇವಳದ ಸಿಬಂದಿಯ ಈ ಪ್ರಾಮಾಣಿಕತೆ ಕಂಡು ಸಂತಸಗೊಂಡಿದ್ದಾರೆ.

ಚಿನ್ನದ ಸರವನ್ನು ಮರಳಿ ವಾರಿಸುದಾರರಿಗೆ ನೀಡುವ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಯವರಾದ ಸಂಜೀವ ಕುಲಾಲ್, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.