ಕೊಡವೂರು: ಬೆನ್ನುಮೂಳೆ ಮುರಿತಕ್ಕೊಳಗಾದವರ ಮನೆಗೆ ತೆರಳಿ ತಪಾಸಣೆ

ಕೊಡವೂರು: ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೊಡವೂರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು ವತಿಯಿಂದ ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತು ವಯಸ್ಸಾದವರಿಗೆ ಹಾಗೂ ನಡೆಯಲು ಅಶಕ್ತರಾದವರಿಗೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು, ಡಾ. ಸುಬ್ರಮಣ್ಯ ಶಿರ್ವ ಎಂ.ಒ, ಡಾ. ಸ್ವಾತ್ವಿಕ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಸವಿತಾ. ಡಿ, ಪಿ.ಎಚ್.ಸಿ.ಒ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಯುವಕ ಸಂಘ ಕೊಡವೂರು ಅಧ್ಯಕ್ಷ ಪ್ರಭಾತ್ ಕೊಡವೂರು, ಅಮಿತ್ ಗರ್ಡೆ, ವಿನಯ್ ಮತ್ತಿತರರು ಹಾಜರಿದ್ದರು.