ದುರ್ಗಾ ದೌಡ್ ಗೆ ಸಜ್ಜಾದ ಕೃಷ್ಣ ನಗರಿ: 50 ಸಾವಿರ ಮಿಕ್ಕಿ ಹಿಂದೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ

ಉಡುಪಿ: ಹಿಂ.ಜಾ.ವೇ ವತಿಯಿಂದ ಅ.5 ರಂದು ಉಡುಪಿಯಲ್ಲಿ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳು ಜರುಗುತ್ತಿವೆ. ಭೋಪಾಲದ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಧ್ಯಾಹ್ನ 2 ಗಂಟೆಗೆ ದಿಕ್ಸೂಚಿ ಭಾಷಣ ನೆರವೇರಿಸಲಿದ್ದಾರೆ. ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಿಂದ ಉಡುಪಿ ಕೃಷ್ಣ ಮಠದವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ದೂರದ ಊರುಗಳಿಂದ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಕಳ, ಕುಂದಾಪುರ, ದ.ಕ ಮುಂತಾದೆಡೆಗಳಿಂದ […]

ಪತ್ರಕರ್ತೆ ಹರ್ಷಿಣಿ ಬ್ರಹ್ಮಾವರ ಇವರಿಗೆ ಬೀಳ್ಕೊಡುಗೆ

ಉಡುಪಿ: ಕಳೆದ ಎಂಟು ವರ್ಷಗಳ ಕಾಲ ಉಡುಪಿಯಲ್ಲಿ ಡೈಜಿ ವರ್ಲ್ಡ್ ಸಂಸ್ಥೆಯ ವರದಿಗಾರ್ತಿಯಾಗಿ ಕೆಲಸ ಮಾಡಿಕೊಂಡಿದ್ದ ಹರ್ಷಿಣಿ ಬ್ರಹ್ಮಾವರ ಅವರ ಬೀಳ್ಕೊಡುಗೆ ಸಮಾರಂಭವನ್ನು ಉಡುಪಿಯ ಬ್ರಹ್ಮಗಿರಿಯ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಉಡುಪಿ ಜಿಲ್ಲಾ ಕಾರ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತ ಬಿ.ಬಿ. ಶೆಟ್ಟಿಗಾರ್ ಹರ್ಷಿಣಿ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಪದವಿಯ ನಂತರ ಉಡುಪಿಯ ಜಿ.ಶಂಕರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಹರ್ಷಿಣಿ ಬ್ರಹ್ಮಾವರ, ಮಾಧ್ಯಮ ಕ್ಷೇತ್ರದ ಮೇಲಿನ ಅತೀವ […]

ಕೊಡವೂರು: ಬೆನ್ನುಮೂಳೆ ಮುರಿತಕ್ಕೊಳಗಾದವರ ಮನೆಗೆ ತೆರಳಿ ತಪಾಸಣೆ

ಕೊಡವೂರು: ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೊಡವೂರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು ವತಿಯಿಂದ ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತು ವಯಸ್ಸಾದವರಿಗೆ ಹಾಗೂ ನಡೆಯಲು ಅಶಕ್ತರಾದವರಿಗೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು, ಡಾ. ಸುಬ್ರಮಣ್ಯ ಶಿರ್ವ ಎಂ.ಒ, ಡಾ. ಸ್ವಾತ್ವಿಕ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಸವಿತಾ. ಡಿ, ಪಿ.ಎಚ್.ಸಿ.ಒ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಯುವಕ ಸಂಘ ಕೊಡವೂರು ಅಧ್ಯಕ್ಷ ಪ್ರಭಾತ್ […]

ಲೇಖಕಿ ಡಾ. ರೇಖಾ ವಿ ಬನ್ನಾಡಿಗೆ ಮಾತೃ ವಿಯೋಗ

ಕುಂದಾಪುರ: ಲೇಖಕಿ ಡಾ.ರೇಖಾ ವಿ. ಬನ್ನಾಡಿಯವರ ತಾಯಿ, ಕಂದಾವರ ಕೊಂಗವಳ್ಳಿ ಮನೆ ದಿ. ಶಂಕರ ಶೆಟ್ಟರ ಪತ್ನಿ ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿಯವರು(85 ವರುಷ) ಸೆ. 30 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರು ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂಧತ್ವವನ್ನು ಮೀರಿ ನಿಂತ ಬಡಿಗೇರ ಸಹೋದರರು: ಕಣ್ಣಿಲ್ಲದಿದ್ದರೂ ರಥ ನಿರ್ಮಾಣ ಮಾಡಿ ಸೈ ಎನಿಸಿಕೊಂಡರು

ಕೊಪ್ಪಳ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ಕೊಪ್ಪಳ ತಾಲೂಕಿನ ರಮೇಶ ಮತ್ತು ಸುರೇಶ ಬಡಿಗೇರ ಎನ್ನುವ ಸಹೋದರರಿಬ್ಬರು ಇದಕ್ಕೆ ಜ್ವಲಂತ ಉದಾಹರಣೆ. ಕೊಪ್ಪಳದ ಈ ಪ್ರತಿಭಾವಂತ ಜೋಡಿ ರಾತ್ರಿಗುರುಡುತನದಿಂದ ಬಳಲುತ್ತಿದ್ದರೂ, ಇಲ್ಲಿನ ಆಂಜನೇಯ ದೇವಸ್ಥಾನಕ್ಕೆ 29 ಅಡಿ ಎತ್ತರದ ಅತ್ಯಂತ ಸುಂದರವಾದ ರಥವನ್ನು ನಿರ್ಮಿಸಿ, ಕಣ್ಣಿದ್ದವರೆಲ್ಲಾ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಹುಟ್ಟಿಸಿದ ದೇವರು ಕಣ್ಣಿಗೆ ಬೆಳಕು ನೀಡದಿದ್ದರೂ, ತಮ್ಮ ಅಂಧತ್ವವನ್ನೂ ಮೀರಿ ಆ ದೇವರಿಗೆ ಸಮರ್ಪಣೆ ಮಾಡುವ ರಥವನ್ನು ನಿರ್ಮಾಣ ಮಾಡಿದ ಜೋಡಿಯ ಜೀವನವೆ ಒಂದು […]